

ಇಂಡೋನೇಷ್ಯಾ: ಬಾಲಿಯ ದೇಗುಲವೊಂದರ ಮರವನ್ನು ತಬ್ಬಿ ಮಹಿಳೆಯೊಬ್ಬಳು ನಗ್ನ ಫೋಟೋಗಳನ್ನು ತೆಗೆಸಿಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ.
ದೇವಸ್ಥಾನದ ಆವರಣದಲ್ಲಿರುವ ಪವಿತ್ರ ಮರ ಹಿಂದೂಗಳ ಶ್ರದ್ಧಾ ಹಾಗೂ ಭಕ್ತಿಯ ಕೇಂದ್ರ. ಭಾರಿ ಗಾತ್ರದ ಮರದ ಕಳೆಗೆ ಮಹಿಳೆ ನಗ್ನ ಫೋಟೋ ಶೂಟ್ ಮಾಡಿದ್ದಾಳೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ರಷ್ಯಾದ ಖ್ಯಾತ ಇನ್ಸ್ಟಾಗ್ರಾಮರ್ ಲೊಯ್ಜಾ ಕೊಶ್ಯಾಕ್ ಎಂಬಾಕೆ ಬಾಲಿಯ ದೇಗುಲದ ಮರಗಳ ಬಳಿ ನಗ್ನ ಶೂಟ್ ಮಾಡಿಸಿದ್ದಾಳೆ, ಬಾಲಿಯ ಹಿಂದೂ ಸಮುದಾಯದವ ಆಕ್ರೊಶಕ್ಕೆ ಇದು ಕಾರಣವಾಗಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ಮಹಿಳೆಯನ್ನು ಗಡಿಪಾರು ಮಾಡಲಾಗಿದೆ.
ಬಾಲಿಯ ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ಆರಂಭಿಸಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಇಂಡೋನೇಷಿಯಾ ಅಧಿಕಾರಿಗಳು, ನಗ್ನ ಫೊಟೋಶೂಟ್ ಮಾಡಿಸಿಕೊಂಡ ಲೂಯ್ಜಾ ಕೋಶ್ಯಾಕ್ ಬಂಧಿಸಿದ್ದಾರೆ. ಬಳಿಕ ಮಾಸ್ಕೋಗೆ ಗಡಿಪಾರು ಮಾಡಿದ್ದಾರೆ. ಇಷ್ಟೇ ಅಲ್ಲ ಇಂಡೋನೇಷಿಯಾ ಪ್ರವೇಶಿಸಿದಂತೆ ನಿರ್ಬಂಧ ಹೇರಲಾಗಿದೆ.
ಬಾಲಿಯ ಜನತೆ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದು, ನಮ್ಮ ಸಂಸ್ಕೃತಿಯನ್ನು ಗೌರವಿಸಿ ಇಲ್ಲವೇ ಬರಬೇಡಿ ಎಂದಿದ್ದಾರೆ. ಭಾರೀ ಪ್ರತಿಭಟನೆ ನಂತರ ಮಹಿಳೆಗೆ ಇನ್ನೆಂದೂ ಇಂಡೋನೇಷ್ಯಾ ಪ್ರವೇಶಿಸದಂತೆ ಸೂಚಿಸಲಾಗಿದೆ.
ಬಾಲಿಗೆ ಆಗಮಿಸುವ ಪ್ರವಾಸಿಗರ ಮೇಲೆ ಸ್ಥಳೀಯರು ಕಣ್ಣಿಡಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಪೊಲೀಸರು, ಅಧಿಕಾರಿಗಳು ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಹಿಂದೂ ಸಮುದಾಯ ಹೇಳಿದೆ.