ಮಹನೀಯರ ಆದರ್ಶ ಸ್ಫೂರ್ತಿ

ambruteshwara
ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸಿ ಜಯಂತ್ಯುತ್ಸವ ನಡೆಯಿತು. ಮಂಜುಳಾ ಮಲ್ಲಿಗವಾಡ, ಟಿ.ಪುಟ್ಟಪ್ಪ, ಕೆ.ಟಿ.ಹಾಲೇಶ್ ಇತರರಿದ್ದರು.
Published on

ತರೀಕೆರೆ: ಮಕ್ಕಳು ಉತ್ತಮ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಕಿ ಮಂಜುಳಾ ಮಲ್ಲಿಗವಾಡ ಹೇಳಿದರು.
ಸೋಮವಾರ ತಾಲೂಕಿನ ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸಿ ಜಯಂತಿ ಉದ್ಘಾಟಿಸಿ ಮಾತನಾಡಿ, ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸಿ ದೇಶಕ್ಕೆ ನೀಡಿರುವ ಕೊಡುಗೆ ಅನನ್ಯ. ಇಂಥ ಮಹನೀಯರು ಪ್ರತಿ ಹಂತದಲ್ಲೂ ನಮಗೆ ಸ್ಫೂರ್ತಿಯಾಗಬೇಕು ಎಂದರು.
ವಿದ್ಯಾಸಂಸ್ಥೆಯ ಪದಾಧಿಕಾರಿಗಳಾದ ಟಿ.ಪುಟ್ಟಪ್ಪ, ಷಡಾಕ್ಷರಪ್ಪ, ಮುಖ್ಯ ಶಿಕ್ಷಕ ಕೆ.ಟಿ.ಹಾಲೇಶ್, ಸಹ ಶಿಕ್ಷಕರಾದ ಪಂಚಾಕ್ಷರಪ್ಪ, ಬಿ.ಸವಿತಮ್ಮ, ಖಿಜರ್‌ಖಾನ್, ರಮಾಕಾಂತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net