ಖೇಲ್ ಖತಮ್..ನನ್ನ ದುಡ್ಡು ಹೋಯ್ತು, ಈಗೇನು ಮಾಡ್ಲಿ?: ಅಮಿತಾಭ್​​ ಬಚ್ಚನ್​​

tweet
Published on

ಮುಂಬೈ: ಟ್ವಿಟರ್ ಬ್ಲೂ ಟಿಕ್ ನವೀಕರಣ ಕುರಿತಾಗಿ ಬಾಲಿವುಟ್​ ನಟ ಅಮಿತಾಭ್​ ಬಚ್ಚನ್ 'ಖೇಲ್ ಖತಮ್, ‘ನಾನು ದುಡ್ಡು ಕಳೆದುಕೊಂಡೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬ್ಲೂಟಿಕ್ ಮಾಯವಾದ ಬೆನ್ನಲ್ಲೇ ಅನೇಕ ಸೆಲೆಬ್ರಿಟಿಗಳು ಸಿಟ್ಟಾದರು. ಕೆಲವರು ತಾವು ಹಣ ಪಾವತಿಸುವುದಿಲ್ಲ ಎಂದು ನೇರವಾಗಿಯೇ ಹೇಳಿದರು. ಈ ಬೆನ್ನಲೇ ಹಲವು ಸೆಲೆಬ್ರಿಟಿಗಳಿಗೆ ಬ್ಲೂಟಿಕ್ ಮರಳಿ ಸಿಕ್ಕಿದೆ.

ಈ ಬೆಳವಣಿಗೆ ಬಗ್ಗೆ ಅಮಿತಾಭ್ ಬಚ್ಚನ್ ಅಸಮಾಧಾನ ಹೊರಹಾಕಿದ್ದಾರೆ. ಬ್ಲೂಟಿಕ್ ಪಡೆಯಲು ಅವರು ಹಣ ಪಾವತಿಸಿದ್ದರು. ಆ ಬಳಿಕ ಮಸ್ಕ್ ಕಡೆಯಿಂದ ಹೊಸ ಘೋಷಣೆ ಆಯಿತು.

ಹೊಸ ನಿಯಮ: 1 ಮಿಲಿಯನ್ ಅಂದರೆ 10 ಲಕ್ಷಕ್ಕಿಂತ ಅಧಿಕ ಹಿಂಬಾಲಕರು ಇರುವ ಟ್ವಿಟರ್​ ಬಳಕೆದಾರರ ಖಾತೆಯಲ್ಲಿ ಬ್ಲೂಟಿಕ್ ಹಾಗೆಯೇ ಉಳಿಯುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಹೀಗಾಗಿ, 1 ಮಿಲಿಯನ್​ಗಿಂತ ಅಧಿಕ ಫಾಲೋವರ್ಸ್ ಇರುವವರ ಖಾತೆಗೆ ಬ್ಲೂಟಿಕ್ ಮರಳಿದೆ.

ಟ್ವೀಟ್​​ನಲ್ಲಿ ಏನಿದೆ?: ‘ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎಂದಿರಿ. ನಾನು ಹಣ ಪಾವತಿಸಿದೆ. ಆದರೆ, 1 ಮಿಲಿಯನ್​ಗಿಂತ ಹೆಚ್ಚಿನ ಹಿಂಬಾಲಕರಿದ್ದರೆ ಅವರ ಬ್ಲೂಟಿಕ್​ ಹಾಗೆಯೇ ಇರುತ್ತದೆ ಎಂದು ಈಗ ನೀವು ಹೇಳುತ್ತಿದ್ದೀರಿ. ನನಗೆ 48.4 ಮಿಲಿಯನ್ ಹಿಂಬಾಲಕರಿದ್ದಾರೆ. ನನ್ನ ಹಣ ಈಗಾಗಲೇ ಹೋಗಿದೆ. ನಾನೀಗ ಏನು ಮಾಡಬೇಕು?’ ಎಂದು ಅಮಿತಾಭ್ ಟ್ವೀಟ್ ಮಾಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net