More

    ರಾಹುಲ್ ಗಾಂಧಿಗೆ ಬಡತನ ಗೊತ್ತಿದೆಯೆ? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ

    ಬೆಂಗಳೂರು: ಬಡತನ ಅಂದರೇನು? ಬಡವರ ಬಗ್ಗೆ ರಾಹುಲ್ ಗಾಂಧಿಗೆ ಗೊತ್ತಿದೆಯೆ? ಗರೀಬಿ ಹಠಾವೋ ಎಂದು ಹೇಳಿದವರು 60 ವರ್ಷಗಳ ಆಡಳಿತದಲ್ಲಿ ಬಡತನ ನಿರ್ಮೂಲನ ಮಾಡಲಿಲ್ಲವೇಕೆ ತಿಳಿದಿದೆಯೆ ? ಧರ್ಮಾಧಾರಿತ ಕಾರ್ಯಕ್ತಮ ಕೊಟ್ಟವರು, ಮುಸ್ಲಿಮರನ್ನು ಓಲೈಸುವವರು ಯಾರು ? ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆಗಳ ಸುರಿಮಳೆಗರೆದರು.

    ಬಿಜೆಪಿಯದು ಬಸವೇಶ್ವರರ ತತ್ವಕ್ಕೆ ವಿರುದ್ಧ ನಡೆ, ಉಳ್ಳವರಿಗೆ ಮಣೆ, ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಆರೋಪಗಳಿಗೆ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ತಿರುಗೇಟು ನೀಡಿದ ಶೋಭಾ ಕರಂದ್ಲಾಜೆ, ಬಡವರಿಗೆ ಶೌಚ ಗೃಹ, ಮನೆ, ಅಡುಗೆ ಅನಿಲ ಕೊಡಲು ನರೇಂದ್ರ ಮೋದಿ ಬರಬೇಕಾಯಿತು. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಧರ್ಮಾಧಾರಿತ ಕಾರ್ಯಕ್ತಮ ನೀಡಲಾಯಿತು. ಕಾಂಗ್ರೆಸ್​ನ ಮುಸ್ಲಿಂ ತುಷ್ಟೀಕರಣ, ವೋಟ್ ಬ್ಯಾಂಕ್ ರಾಜಕಾರಣ ಜಗಜ್ಜಾಹೀರಾಗಿದೆ ಎಂದು ಶೋಭಾ ಕರಂದ್ಲಾಜೆ ಕುಟುಕಿದರು.

    ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಇಲ್ಲ ಅಂತ ಯಾರು ಹೇಳ್ತಾರೆ? ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟ ಲಕ್ಷ್ಮಣ ಸವದಿ

    ಮಹಾ ಪ್ರಚಾರ ಅಭಿಯಾನ

    ರಾಜ್ಯದ ಪ್ರತಿ ಮತದಾರರನ್ನು ತಲುಪಲು ನಾಳೆಯಿಂದ ಎರಡು ದಿನಗಳ ಕಾಲ ರಾಜ್ಯದಲ್ಲಿ ವಿಶೇಷ ಮಹಾ ಪ್ರಚಾರ ಅಭಿಯಾನ ನಡೆಸಲಿದ್ದು 98 ರಾಷ್ಟ್ರೀಯ ನಾಯಕರು 150 ರಾಜ್ಯ ನಾಯಕರು ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ತಿಳಿಸಿದರು.

    224 ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮುಗಿದಿದೆ, ಅಮಿತ್ ಶಾ, ನಡ್ಡಾ ಪ್ರವಾಸ ಆರಂಭವಾಗಿದೆ. ಮನೆ ಮನೆಗೆ ಭೇಟಿ ಕಾರ್ಯಕ್ರಮ ಆರಂಭವಾಗಿದೆ. ಎಲ್ಲ ಚುನಾವಣೆಗಳಲ್ಲಿಯೂ ಮನೆ ಭೇಟಿಗೆ ಆಧ್ಯತೆ ನೀಡಲಿದ್ದೇವೆ, ಬೂತ್ ಅಭಿಯಾನವನ್ನು ಎರಡು ತಿಂಗಳ ಹಿಂದೆಯೇ ಒಮ್ಮೆ ಮಾಡಿದ್ದು, ಈಗ ನಾಮಪತ್ರ ಸಲ್ಲಿಕೆ ನಂತರ ಅಭ್ಯರ್ಥಿಗಳ ಪರಿಚಯವಮಾಡಿಕೊಟ್ಟು ಮತ್ತೊಮ್ಮೆ ಅಭಿಯಾನಕ್ಕೆ ಮುಂದಾಗಿದ್ದೇವೆ ಎಂದರು.

    ನಾಳೆಯಿಂದ ಎರಡ ದಿನ ವಿಶೇಷ ಮಹಾ ಪ್ರಚಾರ ಅಭಿಯಾನ ಇಡೀ ರಾಜ್ಯಾದ್ಯಂತ ಕೇಂದ್ರ ರಾಜ್ಯ, ಜಿಲ್ಲಾ, ತಾಲ್ಲೂಕು ನಾಯಕರನ್ನು ಇರಿಸಿಕೊಂಡು ಪ್ರಚಾರ ಕಾರ್ಯ ನಡೆಸಲಾಗುತ್ತದೆ, 224 ಕ್ಷೇತ್ರದಲ್ಲೂ ಅಭಿಯಾನ ನಡೆಸಲಿದ್ದು, 98 ಜನ ಕೇಂದ್ರದ ನಾಯಕರು ಹಾಗು ಕೇಂದ್ರ ಸಚಿವರು ಹಾಗು 150 ಕ್ಕೂ ಹೆಚ್ಚಿನ ರಾಜ್ಯದ ನಾಯಕರನ್ನು ಇದರಲ್ಲಿ ಜೋಡಿಸಿದೆ.ಬೆಳಗ್ಗೆಯಿಂದ ಸಂಜೆವರೆಗೂ ನಮ್ಮೆಲ್ಲಾ ನಾಯಕರು ಅಭಿಯಾನದಲ್ಲಿ ತೊಡಗಿಕೊಳ್ಳಲಿದ್ದಾರೆ.ಎಲ್ಲ ಕಡೆ ರೋಡ್ ಶೋ ನಢಸಲಿದ್ದಾರೆ, ಸುದ್ದಿಗೋಷ್ಟಿ ನಡೆಸಲಿದ್ದಾರೆ, ಮನೆ ಮನೆ ಸಂಪರ್ಕ ನಡೆಸಲಿದ್ದು, ಪ್ರಮುಖರ ಸಭೆ ನಡೆಸಲಿದ್ದಾರೆ, ಫಲಾನುಭವಿಗಳ ಜೊತೆ ಸಂವಾದ ನಡೆಸಲಿ ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.

    ಅಭಿಯಾನದಲ್ಲಿ ಆಯಾ ಭಾಗದಲ್ಲಿರುವ ರಾಷ್ಟ್ರ ಪುರುಷರ ಪ್ರತಿಮೆಗೆ ಮಾಲಾರ್ಪಣೆ ನಡೆಸಲಿದ್ದು, ಮಠ, ಮಂದಿರ ಭೇಟಿ ಇರಲಿದೆ. ಜೆಪಿ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್, ಅರುಣ್ ಸಿಂಗ್, ಪ್ರಧಾನ್, ಸೀತಾರಾಮನ್, ಮಾಂಡವಿಯಾ, ಯೋಗಿ ಆದಿತ್ಯನಾಥ್, ಫಡಣವೀಸ್, ಸ್ಮೃತಿ ಇರಾನಿ, ಅಣ್ಣಾನಲೈ, ಸಿಟಿ ರವಿ, ಯಡಿಯೂರಪ್ಪ, ಬೊಮ್ಮಾಯಿ‌, ಸದಾನಂದಗೌಡ, ಶೋಭಾ, ಅಶೋಕ್, ಸೋಮಣ್ಣ, ಕಾರಜೋಳ,ಅಶೋಕ್ ಸೇರಿ ಎಲ್ಲ ನಾಯಕರು ಭಾಗಿಯಾಗಲಿದ್ದಾರೆ ಎಂದರು.

    75 ಜನ ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನು ಚುನಾವಣೆಗೆ ನಿಲ್ಲಿಸುವ ಕೆಲಸವಾಗಿದೆ. ಕಾರ್ಯಕರ್ತರ ಆಧಾರದಲ್ಲಿ ಈ ಬಾರಿ ಚುನಾವಣೆ ಗೆಲ್ಲಲು ಮುಂದಾಗಿದ್ದು ಮತದಾರರನ್ನು ಮುಟ್ಟಲು ಮನೆ ಮನೆ ಅಭಿಯಾನ ನಡೆಸಲಿದ್ದೇವೆ ಎಂದರು.

    ಶೋಭಾ ಕರಂದ್ಲಾಜೆ ಮಾತನಾಡಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಾಲ್ಕು ದಿನ ರಾಜ್ಯ ಪ್ರವಾಸಕ್ಕೆ ಸಮಯ ನೀಡಿದ್ದಾರೆ. ನಾಲ್ಕು ಭಾಗಕ್ಕೆ ನಾಲ್ಕು ದಿನ ಹಂಚಿಕೆ ಮಾಡಿದ್ದೇವೆ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದೊಂದು ದಿನ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ ಎಂದು ವಿವರಿಸಿದರು.

    ಇದನ್ನೂ ಓದಿ: ಕುಮಟಾದಲ್ಲಿ ಕಾಂಗ್ರೆಸ್​ ಬಂಡಾಯ ಶಮನ? ನಾಮಪತ್ರ ಹಿಂಪಡೆಯುತ್ತಾರಾ ಮಾಜಿ ಶಾಸಕಿ..?

    ಎಂ.ಪಿ.ಪ್ರಕಾಶ್ ಪುತ್ರಿ ಸೇರ್ಪಡೆ

    ಮಾಜಿ ಡಿಸಿಎಂ ದಿವಂಗತ ಎಂ.ಪಿ.ಪ್ರಕಾಶ್ ಪುತ್ರಿ ಎಂ.ಪಿ.ಸುಮಾ ವಿಜಯ, ಅಳಿಯ ವಿಜಯಕುಮಾರ್ ಹಿರೇಮಠ, ಮೊಮ್ಮಗ ಸಾತ್ವಿಕ್ ಹಿರೇಮಠ, ಹೂವಿನಹಡಗಲಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಹಣ್ಣಿ ವೀರಮ್ಮ, ಪವಿತ್ರಾ ರಾಮಸ್ವಾಮಿ, ಕೊಡಿಹಳ್ಳಿ ಕೊಟ್ರೇಶ್, ರಾಮಸ್ವಾಮಿ ಚೈತನ್ಯ ಮತ್ತಿರ ಮುಖಂಡರು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಬಾವುಟ ನೀಡಿ ಪಕ್ಷದ ರಾಜ್ಯಾಧ್ಯಕ್ಷ ಸ್ವಾಗತಿಸಿದರು.

    ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್​ ಪುತ್ರಿ ಸುಮಾ ವಿಜಯ್ ಬಿಜೆಪಿ ಸೇರ್ಪಡೆ

    ನೌಕಾನೆಲೆ ಜಾಗದಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಅನುಮತಿ ಕೊಟ್ಟರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ: ಬಿ.ಕೆ.ಹರಿಪ್ರಸಾದ್

    ಪ್ರವಾಸಿಗರೇ ಎಚ್ಚರ; ಇನ್ಮುಂದೆ ಈ ನಗರದಲ್ಲಿ ಸೆಲ್ಫಿ ತೆಗೆದರೆ ಬೀಳಲಿದೆ 24 ಸಾವಿರ ರೂ. ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts