ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಇಲ್ಲ ಅಂತ ಯಾರು ಹೇಳ್ತಾರೆ? ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟ ಲಕ್ಷ್ಮಣ ಸವದಿ

Laxman Savadi
Published on

ಬೆಳಗಾವಿ: ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಿ ಹೇಳುವ ಮೂಲಕ ಬಿಜೆಪಿಯವರು ಜನರ ಭಾವನಗೆಳನ್ನು ಕೆರಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಇದೀಗ ಲಕ್ಷ್ಮಣ ಸವದಿ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸಿದ್ದಾರೆ.‘ಈಗಾಗಲೆ ಲಿಂಗಾಯತರೇ ಇಲ್ಲಿ ಚೀಫ್ ಮಿನಿಸ್ಟರ್ ಇದ್ದಾರಲ್ಲ. ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವರುಣದಲ್ಲಿ ಪ್ರಚಾರದ ಸಂದರ್ಭದಲ್ಲಿ ಹೇಳಿಕೆ ನೀಡುವ ಮೂಲಕ ‘ಲಿಂಗಾಯತ ಸಮುದಾಯಕ್ಕೆ ಅವಮಾನ’ ಮಾಡಿದ್ದಾರೆ ಎಂದು ಬಿಜೆಪಿ ಅರೋಪಿಸಿತ್ತು.

ಇಲ್ಲ ಎಂದು ಯಾರು ಹೇಳ್ತಾರೆ?

ಬಿಜೆಪಿ ಸರ್ಕಾರದಲ್ಲಿ 40% ಕಮೀಷನ್ ಆರೋಪ ವಿಚಾರ ವಿಚಾರವಾಗಿ, ನಿಜಕ್ಕೂ ಬಿಜೆಪಿಯಲ್ಲಿ ಭ್ರಷ್ಟಾಚಾರ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಲಕ್ಷ್ಮಣ ಸವದಿ ಉತ್ತರಿಸುತ್ತಾ, ''ಇಲ್ಲ ಎಂದು ಯಾರು ಹೇಳ್ತಾರೆ'' ಎಂದು ಮರು ಪ್ರಶ್ನೆ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಸವದಿ ಹೇಳಿದರು.

ಈ ಬಾರಿ ಮೌನ ಕ್ರಾಂತಿ!

ಬಿಜೆಪಿ ಅವರಿಗೆ ನಾವು ಒಂದು ಲೋಟ ನೀರೇ ಇರಬಹುದು. ಚುನಾವಣೆ ಆದ ಬಳಿಕ ನಾವು ತಂಬಿಗೆ ನೀರೋ? ಬಕೆಟ್ ನೀರೋ? ಯಾವ ನೀರು ಅಂತ ಗೊತ್ತಾಗುತ್ತದೆ. ಗೋಕಾಕ ಚುನಾವಣೆಯಲ್ಲಿ ಈ ಬಾರಿ ಮೌನ ಕ್ರಾಂತಿ ಆಗುತ್ತದೆ ಎಂದು ಹೇಳುವ ಮೂಲಕ ಶೆಟ್ಟರ್ ಹಾಗೂ ಸವದಿ ಪಕ್ಷ ಬಿಟ್ಟದ್ದು ಸಮುದ್ರದಲ್ಲಿನ ಒಂದು ಲೋಟ ನೀರು ತೆಗೆದಂತೆ ಎಂಬ ಬಿಜೆಪಿಗರ ಹೇಳಿಕೆ ವಿರುದ್ಧ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net