ಲಾಕ್‌ಡೌನ್ 5.0: ಮುಖ್ಯಮಂತ್ರಿಗಳ ಜತೆ ಅಮಿತ್ ಶಾ ಮಾತುಕತೆ

Amit shah 30 Jan 20
Published on

ನವದೆಹಲಿ: ಕರೊನಾ ನಿಯಂತ್ರಿಸುವ ಸಂಬಂಧ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸಿದ್ದಾರೆ.

ನಾಲ್ಕನೇ ಹಂತದ ಲಾಕ್‌ಡೌನ್ ಮುಗಿಯುವ ಹಂತಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲೂ ಲಾಕ್‌ಡೌನ್ ಇರಬೇಕೆ, ಬೇಡವೇ ಎಂಬ ಕುರಿತು ಮುಖ್ಯಮಂತ್ರಿಗಳಿಂದ ಅವರು ಅಭಿಪ್ರಾಯ ಪಡೆದುಕೊಂಡಿದ್ದಾರೆ.

ಒಂದು ವೇಳೆ ಲಾಕ್‌ಡೌನ್ ಮುಂದುವರಿಸಬೇಕಾದರೆ ಅದು ಯಾವ ರೀತಿಯಲ್ಲಿರಬೇಕು, ಯಾವ್ಯಾವ ಚಟುವಟಿಕೆಗಳಿಗೆ ಅನುಮತಿ ನೀಡಬೇಕು, ಯಾವುದನ್ನು ನಿರ್ಬಂಧಿಸಬೇಕು ಎಂಬುದರ ಕುರಿತು ಕೂಡ ಮಾಹಿತಿ ಪಡೆದಿದ್ದಾರೆ.

ನಾಲ್ಕನೇ ಹಂತದ ಲಾಕ್‌ಡೌನ್ ಮೇ 31ಕ್ಕೆ ಮುಕ್ತಾಯವಾಗಲಿದ್ದು, ಜೂನ್ 1ರಿಂದ ಲಾಕ್‌ಡೌನ್ 5.0 ಆರಂಭವಾಗಲಿದೆ. ಕರೊನಾ ಹೆಚ್ಚಾಗಿರುವ 11 ನಗರಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳಲ್ಲಿ ಬಹುತೇಕ ಸೇವೆ, ಸೌಲಭ್ಯಗಳಿಗೆ ಈ 5ನೇ ಹಂತದಲ್ಲಿ ಅವಕಾಶ ಮಾಡಿಕೊಡಲು ಕೇಂದ್ರ ಬಯಸಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net