ಸಮಿತಿ ವರದಿ ಬಳಿಕ ಹಳೆಯ ಪಿಂಚಣಿ ಯೋಜನೆ ಬಗ್ಗೆ ಚರ್ಚೆ: ಅಮಿತ್ ಶಾ

Untitled design (26)
Published on

ನವದೆಹಲಿ: ಈ ಉದ್ದೇಶಕ್ಕಾಗಿ ರಚಿಸಲಾದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ನಂತರ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸುವ ಬಗ್ಗೆ ಸರ್ಕಾರ ಉದ್ದೇಶಪೂರ್ವಕವಾಗಿ ಚರ್ಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

2022 ರಲ್ಲಿ ಕಾಂಗ್ರೆಸ್ ಆಡಳಿತದ ರಾಜ್ಯಗಳಾದ ಛತ್ತೀಸ್‌ಗಢ ಮತ್ತು ರಾಜಸ್ಥಾನಗಳು ಡಿಫೈನ್ಡ್ ಪೆನ್ಶನ್ ಬೆನಿಫಿಟ್ ಸ್ಕೀಮ್ ಅಥವಾ ಓಪಿಎಸ್​ (DPBS/OPS) ಮರುಸ್ಥಾಪನೆಯನ್ನು ಘೋಷಿಸಿದವು. ಮರುಸ್ಥಾಪನೆಗಾಗಿ ಕಾರ್ಮಿಕ ಸಂಘಟನೆಗಳು ಮತ್ತು ಹಲವಾರು ನೌಕರರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿವೆ.

ಇಂದು ಜೈಪುರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒಪಿಎಸ್ ಮರುಸ್ಥಾಪನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅಮಿತ್​ ಶಾ, “ನಾವು ಒಪಿಎಸ್ ಬಗ್ಗೆ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಿದ್ದೇವೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ಕೂಡಲೇ ಅದರ ಬಗ್ಗೆ ಚರ್ಚಿಸುತ್ತೇವೆ" ಎಂದು ಹೇಳಿದರು.

ಅಮಿತ್​ ಶಾ ಹೇಳಿಕೆಗೆ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ಹೇಳಿದ್ದಿಷ್ಟು: ಅಮಿತ್​ ಶಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಕಾಂಗ್ರೆಸ್ ಒಪಿಎಸ್‌ಗೆ ಖಾತರಿ ನೀಡಿದರೆ, ಬಿಜೆಪಿ ಸಮಿತಿಯನ್ನು ನೀಡುತ್ತದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ, ಖಾತರಿ ಮತ್ತು ಸಮಿತಿ ನಡುವಿನ ವ್ಯತ್ಯಾಸ. ಅಮಿತ್​ ಅವರೇ, ನಮಗೆ ಬದ್ಧತೆ ಬೇಕು, ಸಮಿತಿಯಲ್ಲ. ಈಗ ಒಪಿಎಸ್ ಜಾರಿಯಾದ ಮೇಲೆ ಕಾನೂನು ರೂಪಿಸಿ ಖಾಯಂ ಮಾಡುತ್ತೇವೆ ಎಂಬ ಗ್ಯಾರಂಟಿ ನೀಡುತ್ತಿದ್ದೇವೆ. ಇದು ಸಾರ್ವಜನಿಕ ನಿರ್ಧಾರ" ಎಂದು ಟ್ವೀಟ್​ ಮಾಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net