More

    ನಿರ್ಭಯಾ ನಿಧಿಯಡಿ ನಿರ್ಮಾಣವಾಯ್ತು “ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್”

    ಬೆಂಗಳೂರು: ಇಂದು ರಾಜಧಾನಿಯಲ್ಲಿ ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಥ ಸೌಲಭ್ಯಗಳು ಜನರಿಗೆ ತಲುಪಿದಾಗ, ಉಪಯೋಗಕ್ಕೆ ಬಂದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ರಸ್ತೆಗೆ ಹೂವು ಸುರಿದು ರೈತರ ಆಕ್ರೋಶ; ತುಳಸಿ ಲಗ್ನದಂದೂ ಸೂಕ್ತ ಬೆಲೆ ಸಿಗದೆ ಅನ್ನದಾತ ಕಂಗಾಲು

    ಈ ಬಗ್ಗೆ ಮಾತನಾಡಿದ ಸಿಎಂ, “ಬೆಂಗಳೂರಿನಲ್ಲಿ ಸರಗಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಹಾಗೂ ಕೊಲೆಗಳೂ ಕೂಡ ನಡೆಯುತ್ತಿವೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಿರ್ಭಯಾ ನಿಧಿಯಡಿ ‘ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್’ ಕಟ್ಟಡ ನಿರ್ಮಾಣವಾಗಿದೆ. ಹೆಚ್ಚೆಚ್ಚು ಇದರ ಸದುಪಯೋಗವಾಗುವಂತಾಗಬೇಕು” ಎಂದರು.

    “ಇಂಥ ಸೌಲಭ್ಯಗಳು ಜನರಿಗೆ ತಲುಪಿದಾಗ, ಉಪಯೋಗಕ್ಕೆ ಬಂದಾಗ ಮಾತ್ರ ಸಾರ್ಥಕವಾಗುತ್ತದೆ. 668 ಕೋಟಿ ರೂ. ವೆಚ್ಚದಲ್ಲಿ ಕಮಾಂಡ್ ಸೆಂಟರ್ ನಿರ್ಮಾಣವಾಗಿದೆ. ನಿರೀಕ್ಷಿತ ಫಲ ಸಿಕ್ಕದೆ ಹೋದರೆ ಕಷ್ಟ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ, ಮಹಿಳೆಯರ ಮೇಲೆ ದೌರ್ಜನ್ಯ, ಒಂಟಿ ಮನೆಗಳಿರುವಲ್ಲಿ, ವೃದ್ಧರು ಒಂಟಿಯಾಗಿರುವಲ್ಲಿ ಹೆಚ್ಚಿನ ಗಮನ ನೀಡಬೇಕು” ಎಂದು ಹೇಳಿದರು.

    ಇದನ್ನೂ ಓದಿ: ತಾಪ್ಸಿ ಪ್ರೀತಿಯಲ್ಲಿ ಬಿದ್ದ ಶಾರುಖ್; ‘ಡಂಕಿ’ಗೆ ಸಾಥ್​ ಕೊಟ್ಟ ‘ಲುಟ್​ ಪುಟ್ ಗಯಾ’!

    “ಅಪರಾಧವಾದ ನಂತರ ಶಿಕ್ಷೆ ಕೊಡುವುದು ಒಂದು ಭಾಗ. ಆದ್ರೆ, ಅಪರಾಧಗಳು ನಡೆಯದ ರೀತಿ ತಡೆಯಬೇಕು. ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು. ಪೋಲಿಸರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಬೆಂಗಳೂರು ನಗರದಲ್ಲಿ ಮೊದಲ ಬಾರಿ ಕಮಾಂಡ್ ಸೆಂಟರ್ ಸ್ತಾಪನೆಯಾಗಿದ್ದು, ಅವಶ್ಯಕತೆ ಇರುವವರಿಗೆ ಇದರ ಪ್ರಯೋಜನ ದೊರಕಲಿ” ಎಂದರು.

    “ಅತ್ಯಾಧುನಿಕ ಉಪಕರಣಗಳನ್ನು ಕೇಂದ್ರದಲ್ಲಿ ಅಳವಡಿಸಲಾಗಿದ್ದು, ಇವೆಲ್ಲವೂ ಉಪಯೋಗವಾಗಬೇಕು. ಹಾಗಾದಾರೆ ಮಾತ್ರ ಕಮಾಂಡ್ ಸೆಂಟರ್​ನಿಂದ ಬೆಂಗಳೂರು ನಿಜವಾಗಿಯೂ ಸುರಕ್ಷಿತ ನಗರ ಎನಿಸುತ್ತದೆ. ಪೊಲೀಸರಿಗೂ ಉತ್ತಮ ಹೆಸರು ಬರಲಿದೆ” ಎಂದು ಹೇಳಿದರು.

    ತಾಪ್ಸಿ ಪ್ರೀತಿಯಲ್ಲಿ ಬಿದ್ದ ಶಾರುಖ್; ‘ಡಂಕಿ’ಗೆ ಸಾಥ್​ ಕೊಟ್ಟ ‘ಲುಟ್​ ಪುಟ್ ಗಯಾ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts