More

    ರಸ್ತೆಗೆ ಹೂವು ಸುರಿದು ರೈತರ ಆಕ್ರೋಶ; ತುಳಸಿ ಲಗ್ನದಂದೂ ಸೂಕ್ತ ಬೆಲೆ ಸಿಗದೆ ಅನ್ನದಾತ ಕಂಗಾಲು

    ಹಾವೇರಿ: ತುಳಸಿ ಲಗ್ನದ ಸಂದರ್ಭದಲ್ಲೂ ಹೂವಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆ ಎದುರಿನ ಹೂವಿನ ಮಾರುಕಟ್ಟೆಗೆ ಶುಕ್ರವಾರ ಬಂದಿದ್ದ ರೈತರು ಟನ್‌ಗಟ್ಟಲೇ ತಾಜಾ ಹೂವನ್ನು ರಾಷ್ಟ್ರೀಯ ಹೆದ್ದಾರಿಗೆ ಸುರಿದು ಬರಿಗೈಲಿ ವಾಪಸಾಗಿದ್ದಾರೆ.
    ಸೇವಂತಿಗೆ ಹೂವು, ಚಂಡಿಹೂವು, ಗಲಾಟಿ ಹೂವು, ಬಟನ್ ಗುಲಾಬಿ ಹೂವು ಬೆಳೆದ ಬೆಳೆಗಾರರು ತುಳಸಿ ವಿವಾಹದ ಹಿನ್ನೆಲೆಯಲ್ಲಿ ಹೆಚ್ಚಿನ ಬೆಲೆ ಸಿಗಬಹುದು ಎಂದು ಮಾರುಕಟ್ಟೆಗೆ ಆಗಮಿಸಿದ್ದರು. ಆದರೆ, ಇಲ್ಲಿನ ವ್ಯಾಪಾರಸ್ಥರು ಕೆಜಿ ಹೂವಿಗೆ ಕೇವಲ 10 ರೂ. ಕೇಳುತ್ತಿದ್ದಾರೆ. ಇದರಿಂದ ಹೂವು ಕೀಳಿಸಿದ ಕೂಲಿ ಹಣವೂ ಬರುವುದಿಲ್ಲ, ವಾಹನದ ಪೆಟ್ರೋಲ್‌ಗೂ ಸಾಲುವುದಿಲ್ಲ ಎಂದು ಆಕ್ರೋಶಗೊಂಡ ರೈತರು ರಸ್ತೆ ಮೇಲೆ ಹೂವು ಸುರಿದು ಬೇಸರ ವ್ಯಕ್ತಪಡಿಸಿದರು.
    ಕಳೆದ ವರ್ಷ ಹೂವಿಗೆ ಉತ್ತಮ ಬೆಲೆ ದೊರೆತಿದ್ದರಿಂದ ಈ ಬಾರಿ ರೈತರು ಹೆಚ್ಚು ಹೂವು ಬೆಳೆದಿದ್ದಾರೆ. ಆದರೆ, ಹೂವು ಖರೀದಿಸುವ ಗ್ರಾಹಕರು ಮಾತ್ರ ಹೆಚ್ಚಾಗಿಲ್ಲ. ಹಾಗಾಗಿ, ಬೆಲೆ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ. ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಹೂವು ಬೆಳೆಗಾರರ ನೋವಿಗೆ ಸ್ಪಂದಿಸಬೇಕು. ಬೆಂಬಲ ಬೆಲೆಯಡಿ ಹೂವು ಖರೀದಿಸಬೇಕು ಎಂದು ನೆಗಳೂರಿನ ಹೂವು ಬೆಳೆಗಾರ ಇಮಾಮಸಾಬ ನದಾಫ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts