ವರ್ಚುವಲ್ ರ‍್ಯಾಲಿಯಲ್ಲಿ ಅಮಿತ್​ ಷಾ ಗುಡುಗು

Amit shah 30 Jan 20
Published on

ನವದೆಹಲಿ: ಅಕ್ಟೋಬರ್-ನವೆಂಬರ್ ವೇಳೆಗೆ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾನುವಾರ ವರ್ಚುವಲ್ ರ‍್ಯಾಲಿ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರದ 6 ವರ್ಷಗಳ ಸಾಧನೆಯನ್ನು ಮುಂದಿಟ್ಟ ಷಾ, ಕರೊನಾ ಸೈನಿಕರಲ್ಲಿ ವಿಶ್ವಾಸ ತುಂಬುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ. ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಕೇಳಿದಾಗ ನೀವು ಬಹುಮತ ನೀಡಿದ್ದೀರಿ. ಈ ಬಾರಿಯೂ ಜನರು ಬಿಜೆಪಿ ಪರ ಇರಲಿದ್ದಾರೆ ಎಂದರು. ಭಾಷಣದ ಬಹುತೇಕ ಸಮಯವನ್ನು ವಲಸೆ ಕಾರ್ವಿುಕರ ವಿಚಾರಕ್ಕೆ ಬಳಸಿಕೊಂಡರು. ಬಿಹಾರದ ಜನತೆಯನ್ನು ವಂಚಿಸಲು ಕೆಲ ನಾಯಕರು ಪ್ರಯತ್ನಿಸುತ್ತಿದ್ದಾರೆ. ವಿಶೇಷವಾಗಿ ವಲಸೆ ಕಾರ್ವಿುಕರು ಇದಕ್ಕೆ ಕಿವಿಗೊಡಬಾರದು. ಇಡೀ ದೇಶ ನಿಮ್ಮನ್ನು ಕೊಂಡಾಡುತ್ತದೆ. ಅಭಿವೃದ್ಧಿ ಹೊಂದಿದ ರಾಜ್ಯಗಳ ತಳಪಾಯಗಳನ್ನು ನೋಡಿದಾಗ ಆ ಅಡಿಪಾಯಗಳಲ್ಲಿ ಬಿಹಾರದ ಘಮಲು ಕಾಣಿಸುತ್ತದೆ ಎಂದು ಷಾ ಹೇಳಿದರು. ವಲಸೆ ಕಾರ್ವಿುಕರಿಗಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದ ಷಾ, ಸುಮಾರು 1.25 ಕೋಟಿ ಜನರನ್ನು ಅವರ ಊರುಗಳಿಗೆ ತಲುಪಿಸಲಾಗಿದೆ. ಜನರು ನಡೆದು ಹೋಗುತ್ತಿದ್ದುದು ಗಮನಕ್ಕೆ ಬಂದಾಗ ಅವರು ಬಸ್ ಹಾಗೂ ರೈಲ್ವೆ ನಿಲ್ದಾಣಗಳಿಗೆ ತಲುಪಲು ನಾವು ಬಸ್ ವ್ಯವಸ್ಥೆ ಮಾಡಿದೆವು. ನಾವು ಆಹಾರ, ವೈದ್ಯಕೀಯ ಮತ್ತು ಬಸ್ ವ್ಯವಸ್ಥೆ ಮಾಡಿದೆವು. ರಾಜ್ಯಗಳಲ್ಲಿ ಎಲ್ಲ ವಲಸೆ ಕಾರ್ವಿುಕರನ್ನು ಶಿಬಿರಗಳಲ್ಲಿ ಇರಿಸುವಂತೆ ಪ್ರಧಾನಿ ಮೋದಿ ಹೇಳಿದ್ದಾರೆ. ಅವರಿಗೆ ಆಹಾರ ಖಾತರಿಪಡಿಸು ವಂತೆ ರಾಜ್ಯಗಳಿಗೆ ಸೂಚಿಸಿದ್ದಾರೆ ಎಂದರು. ಇದನ್ನೂ ಓದಿ: ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ ರಾಜಕೀಯ ಗಣ್ಯರು; ದಿಗ್ಭ್ರಮೆಯಾಗಿದೆ ಎಂದ್ರು ಸಿಎಂ ಯಡಿಯೂರಪ್ಪ

ಜಾಗಟೆ ಪ್ರತಿಭಟನೆ

ಬಿಜೆಪಿಯ ಆನ್​ಲೈನ್ ರ‍್ಯಾಲಿ ಪ್ರತಿಭಟಿಸಿ ಆರ್​ಜೆಡಿ ಕಾರ್ಯಕರ್ತರು ಜಾಗಟೆ ಬಾರಿಸಿ ವಿರೋಧ ದಾಖಲಿಸಿದರು. ಆರ್​ಜೆಡಿ ನಾಯಕರಾದ ರಾಬ್ಡಿ ದೇವಿ, ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಮೊದಲಾದವರು ಪಟನಾದಲ್ಲಿ ತಮ್ಮ ಮನೆಗಳ ಮುಂದೆ ಪಾತ್ರೆಗಳನ್ನು ಬಡಿದು ವಿರೋಧ ಸೂಚಿಸಿದರು. ಲಾಲೂ ಪ್ರಸಾದ್ ಯಾದವ್​ರ ಆರ್​ಜೆಡಿ ಕೂಡ ಭಾನುವಾರ ಪ್ರಚಾರಕ್ಕೆ ಚಾಲನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net