More

    ಲಾಕ್​ಡೌನ್ ಅವಧಿಯಲ್ಲಿ ಚೆನ್ನೈ ಪೊಲೀಸರು ಬರೊಬ್ಬರಿ 11 ಕೋಟಿ ರೂ.ದಂಡ ಸಂಗ್ರಹಿಸಿದ್ದಾರಂತೆ…

    ಚೆನ್ನೈ: ಲಾಕ್​ಡೌನ್ ಅವಧಿಯಲ್ಲಿ ಮಾಸ್ಕ್ ಧರಿಸದೆ ಓಡಾಡುವವರು, ನಿಷೇಧಾಜ್ಞೆ ಉಲ್ಲಂಘಿಸಿದವರು ಹಾಗೂ ಅನಗತ್ಯ ವಾಹನ ಸವಾರರಿಗೆ ಇಲ್ಲಿಯ ಪೊಲೀಸರು ಇಲ್ಲಿಯವರೆಗೆ ವಿಧಿಸಿದ ದಂಡ ಎಷ್ಟು ಗೊತ್ತೆ? ಬರೊಬ್ಬರಿ 10.44 ಕೋಟಿ ರೂ. ಅಂತೆ..!

    ಇದನ್ನೂ ಓದಿ: ಮಧ್ಯಾಹ್ನ ಊಟ ಮಾಡುತ್ತಿದ್ದ ಚಿರುಗೆ ದಿಢೀರ್ ಕಾಣಿಸಿಕೊಂಡಿತ್ತು ಎದೆನೋವು…

    ಕರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ನಗರದ ಇತರ ಏಜೆನ್ಸಿಗಳು ಮತ್ತು ಜಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸರ್ಕಾರ ಪಾಲಿಕೆ    ಆಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿತ್ತು. ಏಪ್ರಿಲ್ 14 ರಂದು ಮೊದಲ ಹಂತದ ಲಾಕ್ಡೌನ್ ಮುಗಿದ ನಂತರ ಪಾಲಿಕೆ ಮತ್ತು ಪೊಲೀಸರು ಮಾಸ್ಕ್ ಧರಿಸದವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

    ಇದನ್ನೂ ಓದಿ: 20 ನಿಮಿಷಗಳಲ್ಲಿ ತಿಳಿಯಬಹುದು ಕರೊನಾ ಸೋಂಕು ಪರೀಕ್ಷೆ ಫಲಿತಾಂಶ…!

    ಏಪ್ರಿಲ್ ಕೊನೆಯ ವಾರ ಮತ್ತು ಜೂನ್ 5 ರ ನಡುವೆ ನಗರದಲ್ಲಿ ಅಂದಾಜು 40,100 ಪ್ರಕರಣಗಳನ್ನು ದಾಖಲಿಸಿದ್ದು, ಮಾಸ್ಕ್ ಧರಿಸದವರಿಗೆ ಕನಿಷ್ಠ ರೂ.500 ದಂಡ ವಿಧಿಸಲಾಗಿದ್ದು, ಇಲ್ಲಿಯವರೆಗೆ ಅದರದೇ 2 ಕೋಟಿ ರೂ. ದಂಡ ಸಂಗ್ರಹವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ : ಕೋಟಿ ವೇತನ ಪಡೆದ ಶಿಕ್ಷಕಿ ನೇಮಕಾತಿಗೆ ಕೊಟ್ಟಿದ್ದಳು 5 ಲಕ್ಷ ರೂ. ಲಂಚ

    ಇಲ್ಲಿಯವರೆಗೆ ನಿಷೇಧಾಜ್ಞೆ ಉಲ್ಲಂಘಿಸಿದವರ ಸಂಖ್ಯೆ ರಾಜ್ಯಾದ್ಯಂತ 5.48 ಲಕ್ಷ ಇದ್ದು, 4.50 ಲಕ್ಷ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆಯವರೆಗೆ ಸಂಗ್ರಹಿಸಿದ ದಂಡ ಬರೊಬ್ಬರಿ ರೂ. 10.44 ಕೋಟಿ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಚ್ಚರಿ ಮೂಡಿಸಿದ ಖಲಿಸ್ತಾನ್ ಜಿಂದಾಬಾದ್ ಭಿತ್ತಿಪತ್ರ; ದೇಶದ್ರೋಹಿ ಕೃತ್ಯಕ್ಕೆ ಕುಮ್ಮಕ್ಕು ಯಾರದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts