20 ನಿಮಿಷಗಳಲ್ಲಿ ತಿಳಿಯಬಹುದು ಕರೊನಾ ಸೋಂಕು ಪರೀಕ್ಷೆ ಫಲಿತಾಂಶ...!

Test kit
Published on

ಹೈದರಾಬಾದ್​: ಇಲ್ಲಿನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ ಸಂಸ್ಥೆ ಕೇವಲ 20 ನಿಮಿಷಗಳಲ್ಲಿ ಕರೊನಾ ಸೋಂಕಿನ ಪರೀಕ್ಷೆಯ ಫಲಿತಾಂಶ ತಿಳಿಯಬಹುದಾದ ದೇಶೀಯ ಕಿಟ್​ ಅಭಿವೃದ್ಧಿಪಡಿಸಿದೆ.

ಈ ವಿಧಾನದಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುವ ರಿವರ್ಸ್​ ಟ್ರಾನ್ಸ್ಕ್ರಿಪ್ಷನ್​ ಪಾಲಿಮರೇಸ್​ ಚೈನ್​ ರಿಯಾಕ್ಷನ್​ (ಆರ್​ಟಿ-ಪಿಸಿಆರ್​) ಬಳಸಿಲ್ಲ. ಬದಲಾಗಿ ಪರ್ಯಾಯ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದಕ್ಕೂ ಅಚ್ಚರಿಯ ವಿಷಯವೆಂದರೆ ಈ ಕಿಟ್​ ಅಭಿವೃದ್ಧಿಗೆ 550 ರೂ. ವೆಚ್ಚ ಮಾಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿದಲ್ಲಿ ಇದರ ವೆಚ್ಚ 350 ರೂ.ಗೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯ ಕರೊನಾ ಪರೀಕ್ಷೆ ಫಲಿತಾಂಶ ಪಡೆಯಲು ದಿನಗಟ್ಟಲೇ ಕಾಯಬೇಕಲ್ಲದೇ, ಸಾವಿರಾರು ರೂ.ಗಳನ್ನು ವ್ಯಯಿಸಬೇಕಾಗಿದೆ.

ಸದ್ಯ ಈ ಕಿಟ್​ಅನ್ನು ಹೈದರಾಬಾದ್​ನ ಇಎಸ್​ಐ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮಾನ್ಯತೆ ನೀಡುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಕೋರಲಾಗಿದೆ. ಪೇಟೆಂಟ್​ಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಗುಣಲಕ್ಷಣಗಳಿರುವ ಹಾಗೂ ಗುಣಲಕ್ಷಣಗಳಿಲ್ಲದ ವ್ಯಕ್ತಿಗಳಲ್ಲೂ ಇದು 20 ನಿಮಿಷಗಳಲ್ಲೇ ಸೋಂಕಿನ ಲಕ್ಷಣ ಪತ್ತೆಹಚ್ಚಬಲ್ಲುದು ಎಂದು ಹೈದರಾಬಾದ್​ ಐಐಟಿಯ ಪ್ರಾಧ್ಯಾಪಕ ಶಿವ ಗೋವಿಂದ್​ ಸಿಂಗ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net