

ಗಾಂಧಿನಗರ: ಮುಂದಿನ ಪ್ರಧಾನಿ ಯಾರಾಗ್ತಾರೆ? ಈ ಪ್ರಶ್ನೆಗೆ ನರೇಂದ್ರ ಮೋದಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಯೋಗಿ ಆದಿತ್ಯನಾಥ್... ಅವರುಗಳ ಹೆಸರು ಕೇಳಿಬರುತ್ತಿವೆ. ಇದರ ನಡುವೆಯೂ ಬಿಜೆಪಿ ವಲಯದಲ್ಲಿ ತೆರೆಮರೆಯಲ್ಲೇ ಮೋದಿ ಅವರ ವಯಸ್ಸಿನ ಬಗ್ಗೆ ಚರ್ಚೆಯೂ ಆಗ್ತಿದೆ. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಬಿಜೆಪಿಯಲ್ಲಿ ಮುಂದಿನ ಪಿಎಂ ಅಭ್ಯರ್ಥಿ ಯಾರು? ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದೆ.
ಈ ಪ್ರಶ್ನೆಗೆ ಇಂದು(ಭಾನುವಾರ) ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಿದ್ದಾರೆ. ಗಾಂಧಿನಗರದಲ್ಲಿ ವಿವಿಧ ಯೋಜನೆ ಮತ್ತು ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, 2024ರಲ್ಲಿ ನಡೆಯಲಿವರು ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನಿಯಾಗಿ ಆಯ್ಕೆ ಮಾಡಲು ಇಡೀ ದೇಶವೇ ಕಾತರಿಂದ ಕಾಯುತ್ತಿದೆ. ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶವು ಮುಂದಿನ ಬಾರಿಯೂ ಮೋದಿ ಅವರೇ ಪ್ರಧಾನಿ ಆಗಿ ಆಯ್ಕೆಯಾಗುತ್ತಾರೆ ಎಂದು ಸ್ಪಷ್ಟ ಸಂದೇಶ ಸಾರಿದೆ ಎಂದರು.
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಗುಜರಾತ್ ಮತ್ತು ಬಿಜೆಪಿಗೆ ಅವಮಾನಿಸಲು ಯತ್ನಿಸಿದವರಿಗೆ ಜನರೇ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಆಪ್ ಮತ್ತು ಕಾಂಗ್ರೆಸ್ಗೆ ಶಾ ಟಾಂಗ್ ನೀಡಿದರು.