ಒಂದೂವರೆ ವರ್ಷ ಬ್ರೇಕ್ ತೆಗೆದುಕೊಳ್ಳಲಿರುವ ಆಮೀರ್ ಖಾನ್; ಕಾರಣ ಹೇಗಿದೆ ನೋಡಿ…!

New Project (14)
Published on

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಫ್ಯಾಮಿಲಿ ಜತೆ ಸಮಯ ಕಳೆಯಲು ಆ್ಯಕ್ಟಿಂಗ್​ನಿಂದ ಒಂದೂವರೆ ವರ್ಷ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಲಾಲ್ ಸಿಂಗ್ ಛಡ್ಡಾ ರಿಲೀಸ್ ಬಳಿಕ ಮೊದಲ ಬಾರಿ ದೆಹಲಿಯ ಒಂದು ಸಮಾರಂಭದಲ್ಲಿ ಕಾಣಿಸಿಕೊಂಡ ಆಮೀರ್, "ನಾನು 35 ವರ್ಷಗಳ ಕಾಲ ಕೆಲಸದ ಮೇಲೆ ಮಾತ್ರ ಗಮನ ಹರಿಸಿದೆ. ಈಗ ನನಗೆ ಫ್ಯಾಮಿಲಿ ಜತೆ ಟೈಂ ಸ್ಪೆಂಡ್ ಮಾಡಬೇಕೆಂದೆನಿಸಿದೆ" ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ಇದನ್ನು ಹೊರತುಪಡಿಸಿ ಅವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಎಲ್ಲರ ಗಮನ ಸೆಳೆಯಿತು.
ಆಮೀರ್ ತಮ್ಮ ಸಿನಿಮಾ ಜೀವನದ ಬಗ್ಗೆ ಮಾತನಾಡಿ, "ನಟನಾಗಿ ಸಿನಿಮಾ ಮಾಡುವಾಗ ನನ್ನ ಜೀವನದಲ್ಲಿ ಬೇರೆ ಏನೂ ನಡೆಯುತ್ತಿಲ್ಲ ಎಂಬಂತೆ ಕಳೆದು ಹೋಗುತ್ತೇನೆ. ಲಾಲ್ ಸಿಂಗ್ ಛಡ್ಡಾದ ನಂತರ ಚಾಂಪಿಯನ್ ಸಿನಿಮಾ ಮಾಡಬೇಕಿತ್ತು. ಅದು ಸುಂದರವಾದ ಕಥೆ, ಅದ್ಭುತವಾದ ಸ್ಕ್ರಿಪ್ಟ್ ಮತ್ತು ಹೃದಯಸ್ಪರ್ಶಿ ಚಿತ್ರ. ಆದರೆ ನನಗೆ ಬ್ರೇಕ್ ಬೇಕಿದೆ, ನನ್ನ ಕುಟುಂಬ, ತಾಯಿ, ಮಕ್ಕಳ ಜತೆ ಕಾಲ ಕಳೆಯಬೇಕೆಂದು ಅನಿಸಿದೆ."
ಆಮೀರ್ ಆ್ಯಕ್ಟಿಂಗ್​ಗೆ ಅಲ್ಪ ವಿರಾಮ ಹೇಳುವುದರ ಜತೆಗೆ ತಮ್ಮ ಬ್ಯಾನರ್ ಅಡಿಯಲ್ಲಿ ಮೂಡಿ ಬರುವ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಒಂದು-ಒಂದೂವರೆ ವರ್ಷ ನಟನಾಗಿ ಕೆಲಸ ಮಾಡುವುದಿಲ್ಲ ಆದರೆ ಸಕ್ರಿಯವಾಗಿ ಚಾಂಪಿಯನ್ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net