ಇಲ್ಲಿವೆ ಸ್ಯಾಂಡಲ್​ವುಡ್​ ನಟ-ನಟಿಯರ ಬಾಲ್ಯದ ಫೋಟೋಗಳು; ಇವರೆಲ್ಲಾ ಯಾರೆಂದು ಕಮೆಂಟ್ ಮಾಡಿ…

Sandalwood Stars
Published on

ಬೆಂಗಳೂರು: ಎಲ್ಲರಿಗೂ ಸಿನಿಮಾ ನಟ-ನಟಿಯರ ಮೇಲೆ ಅದೇನೋ ಮೋಹ. ತಮ್ಮ ನೆಚ್ಚಿನ ನಟ-ನಟಿಯರು ಹೇಗೆ ಕಾಣಿಸಿಕೊಳ್ಳುತ್ತಾರೆ, ಯಾವೆಲ್ಲಾ ಬ್ರ್ಯಾಂಡೆಡ್ ವಸ್ತುಗಳನ್ನು ಉಪಯೋಗಿಸುತ್ತಾರೆ ಎಂಬೆಲ್ಲಾ ಕುತೂಹಲ ಇರುತ್ತದೆ. ಅದರಲ್ಲೂ ತಮ್ಮಿಷ್ಟದ ಚಿತ್ರತಾರೆಯರು ಬಾಲ್ಯದಲ್ಲಿ ಹೇಗಿದ್ದಿರಬಹುದು ಎಂಬ ಕುತೂಹಲವೂ ಇರುತ್ತದೆ.

ನವೆಂಬರ್ 14 ಮಕ್ಕಳ ದಿನಾಚರಣೆ. ಎಲ್ಲೆಡೆ ಸಂಭ್ರಮದಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಡವೆ ಕನ್ನಡ ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳಂತು ತಮ್ಮ ನೆಚ್ಚಿನ ನಟ, ನಟಿಯ ಬಾಲ್ಯದ ಫೋಟೋಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ಅಂತೆಯೇ ಅನೇಕ ಕನ್ನಡ ಸಿನಿಮಾ ತಾರೆಯರು ಕೂಡಾ ತಮ್ಮ ಮುದ್ದಿನ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ. ನಟಿ ರಾಧಿಕಾ ಪಂಡಿತ್, ನಟಿ ಅನುಪ್ರಭಾಕರ್, ನಿರೂಪಕಿ ಶ್ವೇತಾ ಚಂಗಪ್ಪ, ಶ್ವೇತಾ ಶ್ರೀವಾಸ್ತವ್ ಮುಂತಾದ ನಟಿಯರು ತಮ್ಮ ಮಕ್ಕಳೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಿಕೊಂಡಿದ್ದಾರೆ.

ಇದೀಗ ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ವೈರಲ್ ಆಗುತ್ತಿರುವ ಸ್ಯಾಂಡಲ್​ವುಡ್ ನಟನಟಿಯರ ಬಾಲ್ಯದ ಫೋಟೋಗಳು ಇಲ್ಲಿವೆ. ಇದೀಗ ಈ ನಟ ನಟಿಯರು ಯಾರೆಂದು ಗುರುತು ಹಿಡಿಯುವ ಕೆಲಸ ನಿಮ್ಮದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net