ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ambulance
Published on

ಲಖನೌ: ದೇಶದಾದ್ಯಂತ ಕರೊನಾ ಸೋಂಕಿನ ಅಬ್ಬರ ಹೆಚ್ಚಿದ್ದು, ಸೋಂಕಿತರಿಗೆ ಆ್ಯಂಬುಲೆನ್ಸ್​ ಸೇವೆ ಕಲ್ಪಿಸುವುದೇ ದೊಡ್ಡ ಸಾಹಸವಾಗಿಬಿಟ್ಟಿದೆ. ಹೀಗಿರುವಾಗ ಯುವಕರ ಗುಂಪೊಂದು ಆ್ಯಂಬುಲೆನ್ಸ್​ ಅನ್ನು ದುರ್ಬಳಕೆ ಮಾಡಿಕೊಂಡು ಸಿಕ್ಕಿಹಾಕಿಕೊಂಡಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.

ವಾರಾಣಸಿಯ ರಾಮನಗರ ಏರಿಯಾದಲ್ಲಿ ನಿರ್ಜನ ಪ್ರದೇಶವೊಂದರಲ್ಲಿ ಆ್ಯಂಬುಲೆನ್ಸ್​ ನಿಂತಿತ್ತು. ಸುಮಾರು ಗಂಟೆಗಳಾದರೂ ಆ್ಯಂಬುಲೆನ್ಸ್​ ಅಲ್ಲಿಯೇ ನಿಂತಿದ್ದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ್ಯಂಬುಲೆನ್ಸ್ ಬಳಿ ಹೋಗಿ ನೋಡಿದಾಗ ಅವರಿಗೆ ಶಾಕ್​ ಆಗಿದೆ.

ಮೂವರು ಯುವಕರು ಮತ್ತು ಓರ್ವ ಯುವತಿ ಆ್ಯಂಬುಲೆನ್ಸ್​ನೊಳಗೆ ಮಜಾ ಮಾಡುತ್ತಾ ಕುಳಿತಿದ್ದಾಗಿ ಹೇಳಲಾಗಿದೆ. ತಕ್ಷಣ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ಆ್ಯಂಬುಲೆನ್ಸ್​ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿರುವ ಆ್ಯಂಬುಲೆನ್ಸ್ ಆಗಿದ್ದು, ಅದನ್ನು ಯುವಕನೋರ್ವನಿಗೆ ಆಸ್ಪತ್ರೆ ಬಾಡಿಗೆಗೆ ಕೊಟ್ಟಿದ್ದಾಗಿ ಹೇಳಲಾಗಿದೆ. ಈ ಹಿಂದೆಯೂ ಈ ರೀತಿಯ ದೂರು ಕೇಳಿಬಂದಿತ್ತು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net