More

    ಸ್ವಕ್ಷೇತ್ರಕ್ಕೆ ಪಿಪಿಇ ಕಿಟ್​, ಮಾಸ್ಕ್​ & ಆ್ಯಂಬುಲೆನ್ಸ್​ ಕಳುಹಿಸಿಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

    ಬಾಗಲಕೋಟೆ: ಕರ್ನಾಟಕದ ಹಳ್ಳಿ ಹಳ್ಳಿಗೂ ಕರೊನಾ ಬಿಸಿ ಮುಟ್ಟಿದ್ದು, ಪ್ರತಿ ತಾಲೂಕಿನಲ್ಲೂ ನೂರಾರು ಪ್ರಕರಣಗಳು ಪತ್ತೆಯಾಗುವಂತಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರವಾದ ಬಾದಾಮಿಯಲ್ಲೂ ಸೋಂಕಿನ ಅಬ್ಬರ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಾಲೂಕಿಗೆ ಮೂರು ಆ್ಯಂಬುಲೆನ್ಸ್​ ಕೊಡುಗೆ ನೀಡಿದ್ದಾರೆ.

    ಆ್ಯಂಬುಲೆನ್ಸ್​ ಜತೆ 50 ಪಿಪಿಇ ಕಿಟ್ ಮತ್ತು 100 ಎನ್95 ಮಾಸ್ಕ್​ಗಳನ್ನು ಸಿದ್ದರಾಮಯ್ಯ ಬಾದಾಮಿಗೆ ಕಳುಹಿಸಿಕೊಟ್ಟಿದ್ದಾರೆ. ತಾಲೂಕಿನಲ್ಲಿರುವ ಸಿದ್ದರಾಮಯ್ಯ ಬೆಂಬಲಿಗರು ಅದನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಬಾದಾಮಿ ತಹಸೀಲ್ದಾರ್ ಸುಹಾಸ ಇಂಗಳೆ, ಟಿಎಚ್ ಒ ಡಾ.ಎಂ.ಬಿ.ಪಾಟೀಲ ಅವರಿಗೆ ಈ ಹಸ್ತಾಂತರ ಮಾಡಲಾಗಿದೆ.

    ಕರೊನಾ ಎರಡನೇ ಅಲೆ ಆರಂಭವಾದಾಗಿನಿಂದ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರಕ್ಕೆ ತೆರಳಿಲ್ಲ. ಅವರು ಯಾವಾಗ ಬರುತ್ತಾರೆ ಎಂದು ಜನರು ಕಾಯುತ್ತಿರುವುದಾಗಿ ಹೇಳಲಾಗಿದೆ.

    ಬಾದಾಮಿ ತಾಲೂಕಿನಲ್ಲಿ ಈವರೆಗೆ 1914 ಜನರಿಗೆ ಸೋಂಕು ದೃಢವಾಗಿದೆ. ಅದರಲ್ಲಿ 1036 ಸಕ್ರಿಯ ಪ್ರಕರಣಗಳಿವೆ. 901 ಸೋಂಕಿತರು ಹೋಮ್ ಕ್ವಾರಂಟೈನ್​ನಲ್ಲಿದ್ದ, 64 ಜನರು ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 698 ಜನರಿಗೆ ಸೋಂಕು ಪತ್ತೆಯಾಗಿದೆ ಎನ್ನುವ ಮಾಹಿತಿಯಿದೆ.

    ‘ಪ್ಲೀಸ್​ ನಮ್ಮನ್ನ ರಕ್ಷಿಸಿ..’ ಕಾಪು ಕಡಲ ತೀರದ ನಡುಗುಡ್ಡೆಯಲ್ಲಿ ಸಿಲುಕಿಕೊಂಡ ಕಾರ್ಮಿಕರ ಅಳಲಾಟ

    ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts