ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!

1200154
Published on

ತಮಿಳುನಾಡು: ನಿನ್ನೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅದರಲ್ಲಿದ್ದ ಸೇನಾ ಮುಖ್ಯಸ್ಥರು ಸೇರಿ 13 ಮಂದಿ ಮೃತಪಟ್ಟಿದ್ದ ದೊಡ್ಡ ಆಘಾತದ ಸುದ್ದಿಯ ಬೆನ್ನಿಗೇ ಈಗ ಮತ್ತೊಂದು ಬೇಸರದ ಸುದ್ದಿ ಕೇಳಿ ಬಂದಿದೆ.

ಹೆಲಿಕಾಪ್ಟರ್​ ದುರಂತದಲ್ಲಿ ಸಾವಿಗೀಡಾದ 13 ಮಂದಿಯ ಪೈಕಿ ಒಬ್ಬರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿದೆ. ತಮಿಳುನಾಡಿನ ಮೆಟ್ಟುಪಾಳ್ಯಂ ಬಳಿ ಈ ಅಪಘಾತ ಸಂಭವಿಸಿದೆ.

ಸುಲೂರ್​ ಏರ್​ಫೋರ್ಸ್​ ಬೇಸ್​ಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯುವಾಗ ಈ ಅಪಘಾತ ಸಂಭವಿಸಿದೆ. ಬಳಿಕ ಇನ್ನೊಂದು ಆ್ಯಂಬುಲೆನ್ಸ್​ಗೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಿ ತೆಗೆದುಕೊಂಡು ಹೋಗಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net