ಗರ್ಭಿಣಿಯನ್ನು ಕರೆದುಕೊಂಡು ಬರಬೇಕಿದ್ದ ಆ್ಯಂಬುಲೆನ್ಸ್​ ಅಪಘಾತ! ಸ್ಟಾಪ್​ ನರ್ಸ್​ ಸಾವು

ಅಮಬ
Published on

ರಾಯಚೂರು: ಗರ್ಭಿಣಿ ಒಬ್ಬರನ್ನು ಹೆರಿಗೆಗೆಂದು ಆಸ್ಪತ್ರೆಗೆ ಕರೆತರಲು ಹೊರಟಿದ್ದ ಆ್ಯಂಬುಲೆನ್ಸ್​ಗೆ ಅಪಘಾತವಾಗಿದ್ದು, ಸ್ಟಾಪ್​ ನರ್ಸ್​ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಲಿಂಗಸುಗೂರಿ ತಾಲೂಕಿನ ಪಾಮನಕಲ್ಲೂರಿನಿಂದ ರಾಯಚೂರಿನ ರೀಮ್ಸ್​ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆತರಬೇಕಿತ್ತು. ಅದಕ್ಕೆಂದು ಸ್ಟಾಪ್​ ನರ್ಸ್​ ಸಂಗಮೇಶ್​ (30)ನೊಂದಿಗೆ ಚಾಲಕ ಹನುಮಪ್ಪ ಆ್ಯಂಬುಲೆನ್ಸ್​ನಲ್ಲಿ ಹೊರಟಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್​ ಲಿಂಗಸಗೂರಿನ ಸರ್ಜಾಪುರ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಗುರುವಾರ ರಾತ್ರಿ 11 ಗಂಟೆ ಹೊತ್ತಿಗೆ ಅಪಘಾತ ಸಂಭವಿಸಿದ್ದು, ಸಂಗಮೇಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಹನುಮಪ್ಪನಿಗೆ ಗಂಭೀರ ಗಾಯವಾಗಿದೆ.

ಭತ್ತ ತುಂಬಿದ ಲಾರಿಯನ್ನು ಇಂಡಿಕೇಟರ್​ ಹಾಕದೆಯೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಅವಸರದಲ್ಲಿ ಹೊರಟಿದ್ದ ಅಂಬ್ಯುಲೆನ್ಸ್ ಲಾರಿ ಕಾಣಿಸದ ಹಿನ್ನೆಲೆಯಲ್ಲಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ರಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net