ವ್ಹೀಲಿಂಗ್ ಸವಾರರ ಜತೆಗೆ ಪಾಲಕರಿಗೂ ಶಿಕ್ಷೆ

court
Published on

ಬೆಂಗಳೂರು: ಔಟರ್ ರಿಂಗ್ ರಸ್ತೆಗಳಲ್ಲಿ ರಾತ್ರಿ ವೇಳೆ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಸವಾರರು ಮತ್ತು ವಾಹನ ಕೊಟ್ಟ ಪಾಲಕರು ದೋಷಿ ಎಂದು 2ನೇ ಸಂಚಾರ ಕೋರ್ಟ್ ತೀರ್ಪುನೀಡಿ ದಂಡ ವಿಧಿಸಿದೆ.

ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗುವಂತೆ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಮೂವರು ಸವಾರರು ಮತ್ತು ಅಪ್ರಾಪ್ತರಿಗೆ ವಾಹನ ಕೊಟ್ಟ ಆರೋಪದಡಿ ಮಾಲೀಕರ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ವ್ಹೀಲಿಂಗ್ ಕೇಸಿನಲ್ಲಿ ಮೂವರು ಚಾಲಕರು ಮತ್ತು ಅವರಿಗೆ ವಾಹನ ಕೊಟ್ಟ ಮೂವರು ಮಾಲೀಕರು ದೋಷಿಗಳು ಎಂದು 2ನೇ ಸಂಚಾರ ನ್ಯಾಯಾಲಯ ತೀರ್ಪು ನೀಡಿದೆ. ಜತೆಗೆ 24 ಸಾವಿರ ರೂ. ದಂಡ ವಿಧಿಸಿದೆ.

ಮತ್ತೊಂದು ಕೇಸಿನಲ್ಲಿ ಅಪ್ರಾಪ್ತ ಬಾಲಕನಾಗಿದ್ದ ಕಾರಣಕ್ಕೆ ಬಾಲ ನ್ಯಾಯಮಂಡಳಿ ವಿಚಾರಣೆ ನಡೆಸಿ 3 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಇದೇ ರೀತಿ ಮತ್ತೊಂದು ಕೇಸಿನಲ್ಲಿ ಓರ್ವ ಸವಾರನಿಗೆ 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net