ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಕೇಸ್​: ಅಲ್ಲು ಅರ್ಜುನ್​ಗೆ ಷರತ್ತುಬದ್ಧ ಜಾಮೀನು ಮಂಜೂರು | Allu Arjun

ವಿಜಯವಾಣಿ (22)
Published on

ಹೈದರಾಬಾದ್​: ಸಂಧ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ಟಾಲಿವುಡ್​ ಸ್ಟೈಲಿಶ್ ಸ್ಟಾರ್, ನಟ ಅಲ್ಲು ಅರ್ಜುನ್​ಗೆ ಇದೀಗ ನಾಂಪಲ್ಲಿ ಕೋರ್ಟ್​ ಬಿಗ್ ರಿಲೀಫ್ ನೀಡಿದೆ.

ಪ್ರಕರಣದಲ್ಲಿ ಸಿಲುಕಿದ್ದ ಅಲ್ಲು ಅರ್ಜುನ್​ ವಿಚಾರಣೆ ನಡೆಸಿದ ಕೋರ್ಟ್​, ನಟನಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಕಾಲ್ತುಳಿತ ಕೇಸ್​ನಿಂದ ಬಿಗ್ ರಿಲೀಫ್​ ಕೊಟ್ಟಿದೆ.

ಈ ಹಿಂದೆ ನ್ಯಾಯಾಲಯ ಕಾಲ್ತುಳಿತ ಕೇಸ್​ನಲ್ಲಿ ನಟನಿಗೆ ಮಧ್ಯಂತರ ಜಾಮೀನು ಘೋಷಿಸಿತ್ತು. ಇದಾದ ಬಳಿಕ ರೆಗ್ಯುಲರ್​ ಜಾಮೀನು ಅಥವಾ ನಿಯಮಿತ ಬೇಲ್​ ಪಡೆಯಲು ಅಲ್ಲು ಅರ್ಜುನ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ಇದರ ವಿಚಾರಣೆ ನಡೆಸಿದ ನಾಂಪಲ್ಲಿ ನ್ಯಾಯಾಲಯ, ಕಡೆಗೂ ನಟನಿಗೆ ಜಾಮೀನು ಮಂಜೂರು ಮಾಡಿದೆ.

ಕೋರ್ಟ್​ ವಿಧಿಸಿದ ಷರತ್ತು ಏನು?

ತೀರ್ಪಿನಲ್ಲಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ನಟನಿಗೆ ಒಂದು ಲಕ್ಷ ರೂ. ಭದ್ರತಾ ಹಣ ಹಾಗೂ ಇಬ್ಬರು ವ್ಯಕ್ತಿಗಳ ಶೂರಿಟಿಯನ್ನು ಕೇಳಿದೆ. ಅಲ್ಲು ಅರ್ಜುನ್​ ವಿದೇಶ ಪ್ರಯಾಣ ಕೈಗೊಳ್ಳಲು ಕೋರ್ಟ್​ ಯಾವುದೇ ನಿರ್ಬಂಧ ಹೇರಿಲ್ಲ ಎಂದು ವರದಿ ಉಲ್ಲೇಖಿಸಿದೆ. ಸದ್ಯ ಪ್ರಕರಣದಿಂದ ಬಿಗ್ ರಿಲೀಫ್ ಪಡೆದಿರುವ ಅಲ್ಲು ಅರ್ಜುನ್ ಮುಂಬರುವ ದಿನಗಳಲ್ಲಿ ತಮ್ಮ ಮೇಲಿರುವ ಕೇಸ್​ನ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net