

ಉಡುಪಿ: ಜಿಲ್ಲೆಯ ಟ್ರ್ಯಾಕ್ನಲ್ಲಿ ಸಂಚರಿಸುವ ಎಲ್ಲ ರೈಲುಗಳು ಎರಡು ಗಂಟೆಗಳಿಂದ ಸ್ಥಗಿತಗೊಂಡಿದೆ. ರೈಲ್ವೆ ಟ್ರ್ಯಾಕ್ನ ವಿದ್ಯುತ್ ಕಂಬದ ಮೇಲೆ ಮರವೊಂದು ಬಿದ್ದ ಪರಿಣಾಮವಾಗಿ ರೈಲು ಸಂಚಾರದಲ್ಲಿ ಈ ವ್ಯತ್ಯಯ ಉಂಟಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಮಟಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತೀವ್ರ ಮಳೆಯಿಂದಾಗಿ ಈ ಸನ್ನಿವೇಶ ಎದುರಾಗಿದ್ದು, ದೆಹಲಿ ಕೇರಳ ನಡುವೆ ಸಂಚರಿಸುವ ನಿಜಾಮುದ್ದೀನ್-ತಿರುವನಂತಪುರ ಎಕ್ಸ್ಪ್ರೆಸ್ ರೈಲು ಸ್ಥಗಿತಗೊಂಡಿದೆ.
ತತ್ಪರಿಣಾಮವಾಗಿ ಉಡುಪಿ ಜಿಲ್ಲೆಯ ಟ್ರ್ಯಾಕ್ನಲ್ಲಿ ಸಂಚರಿಸುವ ಎಲ್ಲ ರೈಲುಗಳು ಎರಡು ಗಂಟೆಗಳಿಂದ ಸ್ಥಗಿತಗೊಂಡಿವೆ. ಮರ ತೆರವುಗೊಳಿಸುವ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದೆ.