ಎಲ್ಲ ಶಾಸಕರೂ ಆಕ್ಸಿಜನ್ ಸಿಲಿಂಡರ್ ವಿತರಿಸಿ: ಮುಖ್ಯಮಂತ್ರಿ ಸಲಹೆ

b.s. yediyurappa
Published on

ಬೆಳಗಾವಿ: ಕರೊನಾ ಸೋಂಕಿತರಿಗೆ ವೆಂಟಿಲೇಟರ್ ಬದಲಾಗಿ ಸುಲಭ ಚಿಕಿತ್ಸೆ ನೀಡಬಹುದಾದ ಹೈ ಪ್ರೊ ನೇಸಲ್ ಕೆನಲ್ ಆಕ್ಸಿಜನ್ ಸಿಲಿಂಡರ್​ಗಳನ್ನು ಎಲ್ಲ ಶಾಸಕರು ಸರ್ಕಾರಿ ಆಸ್ಪತ್ರೆಗೆ ನೀಡಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಜರುಗಿದ ಸರಳ ಕಾರ್ಯಕ್ರಮದಲ್ಲಿ 4 ಹೈ ಪ್ರೊ ನೇಸಲ್ ಕೆನಲ್ ಆಕ್ಸಿಜನ್ ಸಿಲಿಂಡರ್​ಗಳನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್್ಸ) ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮೊದಲ ಬಾರಿಗೆ ತಮ್ಮ ಅನುದಾನದಲ್ಲಿ ಈ ಉಪಕರಣ ನೀಡಿ ಅನುಕೂಲ ಕಲ್ಪಿಸಿದ್ದಾರೆ. ಇದೇ ರೀತಿ ಇನ್ನುಳಿದ ಶಾಸಕರೂ ಇಂಥ ಆಕ್ಸಿಜನ್ ಸಿಲಿಂಡರ್ ನೀಡಬೇಕು. ಅದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net