More

    ಕೇರಳ ಸಚಿವಾಲಯದ ಬೆಂಕಿಯಲ್ಲಿ ಸುಟ್ಟು ಹೋದವೇ ಚಿನ್ನ ಕಳ್ಳ ಸಾಗಾಟದ ದಾಖಲೆಗಳು? ವಿಪಕ್ಷಗಳು ಹೇಳೋದೇನು?

    ತಿರುವನಂತಪುರಂ: ಕೇರಳ ಸಚಿವಾಲಯದ ಕಟ್ಟಡದಲ್ಲಿ ಮಂಗಳವಾರ (ಆಗಸ್ಟ್​ 25) ಸಂಭವಿಸಿದ ಅಗ್ನಿ ದುರಂತಕ್ಕೆ ಬೇರೆಯದೇ ವ್ಯಾಖ್ಯಾನ ನೀಡಲಾಗುತ್ತಿದೆ.

    ಮಂಗಳವಾರ ಮಧ್ಯಾಹ್ನ ಸಚಿವಾಲಯದ ಸೌತ್​ ಸ್ಯಾಂಡ್​ವಿಚ್​ ಬ್ಲಾಕ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸಿಎಂ ಕಚೇರಿಗೆ ಸಮೀಪದಲ್ಲಿಯೇ ಈ ಅವಘಡ ಸಂಭವಿಸಿತ್ತು.
    ಸಾಮಾನ್ಯ ಆಡಳಿತ ವಿಭಾಗದ ಸಿಬ್ಬಂದಿ ಮೇಲ್ಭಾಗದಲ್ಲಿದ್ದ ವೈರಿಂಗ್​ನಿಂದ ಏಳುತ್ತಿರುವುದನ್ನು ಗಮನಿಸಿದ್ದರು. ಕೆಲ ಹೊತ್ತಿನಲ್ಲಿಯೇ ಬೆಂಕಿಯೂ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.

    ಇದನ್ನೂ ಓದಿ; ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…! 

    ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಗಳು ಚಿನ್ನದ ಕಳ್ಳಸಾಗಾಟ ಪ್ರಕರಣದಲ್ಲಿನ ಸಾಕ್ಷ್ಯಾಧಾರಗಳ ನಾಶಕ್ಕೆ ನಡೆಸಲಾದ ಕೃತ್ಯ’ ಎಂದೇ ಆರೋಪಿಸಿವೆ.
    ಅಲ್ಲದೇ, ಕಾಂಗ್ರೆಸ್​ ಹಾಗೂ ಬಿಜೆಪಿ ಶಾಸಕರು ಇದನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್​ ಅವರನ್ನು ಪೊಲೀಸರು ಬಂಧಿಸಿದರು.

    ಚಿನ್ನದ ಕಳ್ಳ ಸಾಗಣೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಹಾಗೂ ತನಿಖೆಯ ದಿಕ್ಕನ್ನು ತಪ್ಪಿಸಲು ಬೆಂಕಿ ಹಚ್ಚುವ ಕೆಲಸ ಮಾಡಲಾಗಿದೆ. ದಾಖಲೆಗಳನ್ನು ಸುಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.

    ಇದನ್ನೂ ಓದಿ; ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….! 

    ಸದ್ಯ ಚಿನ್ನ ಕಳ್ಳ ಸಾಗಾಟದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

    ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts