ಅಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

atif
Published on

ಲಖನೌ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಭಾನುವಾರದಂದು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಕೊಲೆಯಾದವ ಹಳೆಯ ಒಂದು ಕೊಲೆ ಪ್ರಕರಣದ ಪಿತೂರಿ ಮಾಡಿದ್ದ ಎನ್ನುವ ಆರೋಪವಿದ್ದು, ಅದೇ ದ್ವೇಷದಿಂದ ಆತನ ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಆತಿಫ್​ ಕೊಲೆಯಾಗಿರುವ ವ್ಯಕ್ತಿ. ವಿವಿಯಲ್ಲಿ ದ್ವಿತೀಯ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ. ಭಾನುವಾರದಂದು ಸ್ನೇಹಿತ ಝೈದ್​ನ ಜತೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಝೈದ್​ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬೈಕ್​ನಲ್ಲಿ ಮನೆಗೆ ಪರಾರಿಯಾಗಿದ್ದಾನೆ.

ಆತಿಫ್​ 2018ರಲ್ಲಿ ಜಮಲ್ಪುರ್ ಪ್ರದೇಶದಲ್ಲಿ ನಡೆದಿದ್ದ ಶಾಬಾಜ್ ಎಂಬ ವ್ಯಕ್ತಿಯ ಹತ್ಯೆಯಲ್ಲಿ ಪಿತೂರಿ ನಡೆಸಿದ್ದ ಆರೋಪವಿದೆ ಎಂದು ಸರ್ಕಲ್ ಆಫೀಸರ್ ಅನಿಲ್ ಸಮನಿಯಾ ತಿಳಿಸಿದ್ದಾರೆ. ಆತನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಹತ್ಯೆಯನ್ನು ಖಂಡಿಸಿ ಎಎಂಯು ವಿದ್ಯಾರ್ಥಿಗಳು ಜೆ.ಎನ್ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net