3797 ಭೂಮಿಯ ವಿನಾಶ, 5079ಕ್ಕೆ ಪ್ರಪಂಚವೇ ಅಂತ್ಯ; ವೈರಲ್​ ಆಗುತ್ತಿದೆ ಬಾಬಾ ವಂಗಾರ ಭವಿಷ್ಯವಾಣಿ

Baba Vanga
Published on

ನವದೆಹಲಿ: ಭವಿಷ್ಯತ್​ ಕಾಲದಲ್ಲಿ ನಡೆಯುವ ಘಟನೆಗಳ ಬಗ್ಗೆ  ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗಿರುವ ಬಾಬಾ ವಂಗಾ ಎಂದೂ ಕರೆಯಲ್ಪಡುವ ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ (85) ಅವರು 1996ರಲ್ಲೇ ಇಹಲೋಕ ತ್ಯಜಿಸಿದ್ದಾರೆ. ಬಲ್ಗೇರಿಯಾ ಮೂಲದವರಾದ ಬಾಬಾ ವಂಗಾ ಅವರು ಭವಿಷ್ಯತ್​ ಕಾಲದ ಬಗ್ಗೆ ನುಡಿದಿದ್ದ ಭವಿಷ್ಯವು ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಸಖತ್​ ಸೌಂಡ್​ ಮಾಡುತ್ತಿದೆ.

ನಿಖರವಾದ ಮುನ್ಸೂಚನೆಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿರುವ ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಅವುಗಳಲ್ಲಿ ಒಂದು ವಿಶ್ವ ವ್ಯಾಪಾರ ಕೇಂದ್ರ (WTC) ಮೇಲಿನ ದಾಳಿ. 2023 ರಲ್ಲಿ, ಬಾಬಾ ವಂಗಾ ಹೇಳಿದ ಕೆಲವು ಭವಿಷ್ಯವಾಣಿಗಳು ನಿಜವಾಗಿದ್ದವು. ಈಗ ಅವರು ಮತ್ತೊಮ್ಮೆ 2025 ಮತ್ತು ಮುಂಬರುವ ವರ್ಷಗಳನ್ನು ಭವಿಷ್ಯ ನುಡಿದಿದ್ದಾರೆ.

12ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡಿದ್ದು, ಅಂದಿನಿಂದ ನನಗೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಉಡುಗೊರೆ ಸಿಕ್ಕಿತು ಎಂದು ಅವರು ಹೇಳಿಕೊಂಡಿದ್ದರು. ಅಮೆರಿಕದ ಮೇಲೆ 2001 ಸೆಪ್ಟೆಂಬರ್ 11ರಂದು ವಿಮಾನದ ಮೂಲಕ ದಾಳಿ ಮಾಡಲಿದ್ದಾರೆ ಎಂದು ನುಡಿದಿದ್ದ ಭವಿಷ್ಯ ನಿಜವಾದ ನಂತರ ಬಾಬಾ ವೆಂಗಾ ಅವರ ಭವಿಷ್ಯಕ್ಕೆ ಅಪಾರ ಅಭಿಮಾನಿಗಳು ಇದ್ದಾರೆ. ಇದೀಗ ಅವರು ಮುಂದಿನ ದಿನಗಳಲ್ಲಿ ನಡೆಯುವ ಘಟನೆಗಳ ಕುರಿತು ನುಡಿದಿರುವ ಭವಿಷ್ಯ ಅನೇಕರನ್ನು ಬೆಚ್ಚಿ ಬೀಳಿಸಿದೆ.

ಭವಿಷ್ಯವಾಣಿಯಲ್ಲಿ ಏನಿದೆ?

2025 ರಲ್ಲಿ ಯುರೋಪ್‌ನಲ್ಲಿನ ಪ್ರಮುಖ ಸಂಘರ್ಷ ಉಂಟಾಗುತ್ತದೆ. ಇದು ಖಂಡದ ಜನಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ. 2028 ರಲ್ಲಿ ಹೊಸ ಶಕ್ತಿಯ ಮೂಲಗಳನ್ನು ಹುಡುಕುವ ಪ್ರಯತ್ನದಲ್ಲಿ ಮಾನವ ಶುಕ್ರನನು ತಲುಪುತ್ತದೆ. 2033 ಧ್ರುವೀಯ ಮಂಜುಗಡ್ಡೆಯ ಕರಗುವಿಕೆಯು ಸಮುದ್ರ ಮಟ್ಟದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗುತ್ತದೆ.2076 ಕಮ್ಯುನಿಸಂ ಜಾಗತಿಕವಾಗಿ ಮರಳಲಿದೆ. 2130 ಭೂಮ್ಯತೀತ ನಾಗರಿಕತೆಗಳೊಂದಿಗೆ ಸಂಪರ್ಕ. 2170 ಜಾಗತಿಕ ಬರ ಬರಲಿದೆ. 3005 ಮಂಗಳದ ಮೇಲೆ ಯುದ್ಧ ನಡಯಲಿದೆ. 3797 ಭೂಮಿಯ ವಿನಾಶ, ಈ ಕಾರಣದಿಂದಾಗಿ ಸೌರವ್ಯೂಹದೊಳಗೆ ಯಾವುದೇ ಇತರ ಗ್ರಹಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. 5079 ಪೂರ್ಣ ಪ್ರಪಂಚವೇ  ಅಂತ್ಯವಾಗುತ್ತದೆ ಎಂದು ಹೇಳಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net