ನವದೆಹಲಿ:ಈ ಬಾರಿಯ ಚುಟುಕು ವಿಶ್ವ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್ 08 ಹಂತ ಪ್ರವೇಶಿಸುವಲ್ಲಿ ವಿಫಲವಾಗಿ ತೀವ್ರವಾಗಿ ಟೀಕೆಗೆ ಗುರಿಯಾಗಿತ್ತು. ಇತ್ತ ಪಾಕ್ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಬಾಬರ್ ಅಜಂ ಮಾತ್ರವಲ್ಲದೇ ತಂಡದಲ್ಲಿರುವ ಬೇರೆ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದು, ತಲೆದಂಡ ಅಥವಾ ದೇಶದ್ರೋಹ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರನೋರ್ವ ಬಾಬರ್ ಅಜಂ ಪರ ಮಾತನಾಡಿದ್ದು, ಆತ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದಾನೆ ಎಂದು ಹೇಳುವ ಮೂಲಕ ಬೆಂಬಲಿಸಿದ್ದಾರೆ.
ಪಾಕಿಸ್ತಾನದ ಪ್ರದರ್ಶನದ ಕುರಿತು ಮಾತನಾಡಿರುವ ಮುಷ್ತಾಕ್ ಅಹ್ಮದ್, ಕಳೆದ ಬಾರಿಗೆ ನೋಡಿದರೆ ಬಾಬರ್ ಆಟದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಆಕ್ರಮಣಶೀಲತೆಯ ಬದಲಾಗಿ ಅವರು ಶಾಂತವಾಗಿ ಆಡುತ್ತಿದ್ದಾರೆ. ನನ್ನ ಪ್ರಕಾರ ಆತ ಇಷ್ಟೊಂದು ಸುಧಾರಣೆ ಕಂಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಒಬ್ಬ ಆಟಗಾರನಿಗೆ ಇಷ್ಟು ಸಾಕು ಎನ್ನಿಸುತ್ತದೆ.
ಇದನ್ನೂ ಓದಿ: ಇದು ರಾಜ್ಯವೇ ಖುಷಿಪಡುವ ಸುದ್ದಿ ಎಂದು ಖ್ಯಾತಿ ಪಡೆದವಳ ಕರಾಳ ಕೃತ್ಯ ಬಯಲು; ದಿವ್ಯಾ ವಸಂತ ಗ್ಯಾಂಗ್ನ ದುಷ್ಕೃತ್ಯ ಬಯಲು
ಒಬ್ಬ ನಾಯಕನಾಗಿ ಆತ ಮಾತ್ರ ಆಡಬೇಕು ಎಂದರೆ ಹೇಗೆ. ಉಳಿದ ಆಟಗಾರರಿಗೂ ಜವಾಬ್ದಾರಿ ನೀಡಲಾಗಿದ್ದು, ಅವರು ಆಡಿದರೆ ಮಾತ್ರ ತಂಡ ಗೆಲ್ಲಲು ಸಾಧ್ಯವಾಗುತ್ತದೆ. ಕಳೆದ 3-4 ವರ್ಷಗಳಿಂದ ಇದಾಗುತ್ತಿದ್ದು, ಬಾಬರ್ ಹೊರತುಪಡಿಸಿ ಇತರ ಆಟಗಾರರು ಪರಿಣಾಮ ಬೀರದಿದ್ದಾಗ ಆತ ಸ್ಕೋರ್ ಮಾಡುತ್ತಾನೆ. ನಾಯಕ ಮಾತ್ರವಲ್ಲದೇ ತಂಡದಲ್ಲಿರುವ ಎಲ್ಲರೂ ಆಡಿದರೆ ಮಾತ್ರ ಗೆಲುವು ದಕ್ಕುತ್ತದೆ.
ನಾವು ಬಾಬರ್ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ಆತನನ್ನು ವಿಶ್ವದಾದ್ಯಂತ ಜನರು ಗೌರವಿಸಲು ಶುರು ಮಾಡುತ್ತಾರೆ. ಆತ ಪಾಕಿಸ್ತಾನಕ್ಕೆ ಗೌರವವ ತಂದು ಕೊಡುತ್ತಾನೆ ಎಂಬ ವಿಶ್ವಾಸ ನನಗಿದೆ. ಜನರು ಬಾಬರ್ ಪಾಕಿಸ್ತಾನ ಕ್ರಿಕೆಟ್ಗೆ ನೀಡಿರುವ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಆತನನ್ನು ಗೌರವಿಸುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.