

ಮುಂಬೈ: ಬಾಲಿವುಡ್ನ ದಿ ಮೋಸ್ಟ್ ಬ್ಯುಸಿಯೆಸ್ಟ್ ನಟ ಯಾರೆಂದು ಕೇಳಿದರೆ ಮೊದಲಿಗೆ ಕೇಳಿ ಬರುವ ಹೆಸರು ಅಕ್ಷಯ್ ಕುಮಾರ್ ಅವರದ್ದು. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಟ ತನ್ನ ಕ್ರೇಜ್ಅನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಇದೀಗ ನಟನ ಹೊಸ ಸಿನಿಮಾ 2025ರ ಗಣರಾಜ್ಯೀತ್ಸವಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.
ಅಕ್ಷಯ್ ಕುಮಾರ್, ವೀರ್, ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಅಭಿನಯದ ಸ್ಕೈ ಫೋರ್ಸ್ (Sky Force) ಚಿತ್ರವು 2025ರ ಗಣರಾಜ್ಯೋತ್ಸದಂದು ತೆರೆಗೆ ಬರಲು ಸಜ್ಜಾಗಿದ್ದು, ಈ ಚಿತ್ರಕ್ಕೆ ದಿನೇಶ್ ವಿಜನ್ ಬಂಡವಾಳು ಹೂಡುತ್ತಿದ್ದು, ಅಮರ್ ಕೌಶಿಕ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಬಾಕ್ಸ್ಆಫೀಸ್ನಲ್ಲಿ ಈಗಾಗಲೇ ಧೂಳೆಬ್ಬಿಸಿರುವ ತೇರಿ ಬಾತೋನ್ ಮೇ ಐಸಾ ಉಲ್ಜಾ ಜಿಯಾ, ಮುಂಜ್ಯಾ, ಸ್ತ್ರೀ-2 ಸಿನಿಮಾದ ಮೂಲಕ ಬಾಲಿವುಡ್ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ದಿನೇಶ್ ವಿಜ್ ಛಾವಾ ಮತ್ತು ಸ್ಕೈ ಫೋರ್ಸ್ ಮೂಲಕ ಮತ್ತೊಂದು ಅಲೆಯನ್ನು ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ. ವಿಕ್ಕಿ ಕೌಶಲ್ ನಟನೆಯ ಛಾವಾ ಡಿಸೆಂಬರ್ 06ರಂದು ಬಿಡುಗಡೆಯಾಗುತ್ತಿದ್ದು, ಅಕ್ಷಯ್ ಕುಮಾರ್ ನಟೆನಯ ಸ್ಕೈ ಫೋರ್ಸ್ ಸಿನಿಮಾವು 2025ರ ಗಣರಾಜ್ಯೋತ್ಸವಕ್ಕೆ ತೆರೆ ಕಾಣುತ್ತಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗಣರಾಜ್ಯೋತ್ಸವದ ದಿನದಂದು ಚಿತ್ರವನ್ನು ಬಿಡುಗಡೆ ಮಾಡಲು ಸಿನಿಮಾ ತಂಡ ಈ ಹಿಂದೆಯೇ ಪ್ಲ್ಯಾನ್ ಹಾಕಿಕೊಂಡಿತ್ತು ಎಂದು ಹೇಳಲಾಗಿದೆ. ಏಕೆಂದರೆ ಸಿನಿಮಾವು ಆ್ಯಕ್ಷನ್, ಸೆಂಟಿಮೆಂಟ್ ಸೇರಿದಂತೆ ಭರಪೂರ ಮನರಂಜನೆಯನ್ನು ಹೊಂದಿದ್ದು, ಈ ಚಿತ್ರವು ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಮೊದಲ ವೈಮಾನಿಕ ದಾಳಿಯನ್ನು ಆಧರಿಸಿ ಮಾಡಲಾಗಿದೆ. ಗಣರಾಜ್ಯೋತ್ಸವದಂದು ಬಿಡುಗಡೆ ಮಾಡಲಾಗುತ್ತಿದ್ದು, ಆ್ಯಕ್ಷನ್ ಪ್ರಿಯರಿಗೆ ರಸದೌತಣ ಫಿಕ್ಸ್ ಎಂದು ಹೇಳಲಾಗಿದೆ.
ಇನ್ನೂ ಚಿತ್ರ ಜನವರಿ 24, 2025ರಂದು ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ದೇಶಾದ್ಯಂತ ಒಂದು ತಿಂಗಳ ಕಾಲ ಪ್ರಚಾರ ನಡೆಸಲು ಪ್ಲ್ಯಾನ್ ಹಾಕಿಕೊಂಡಿದೆ. ಚಿತ್ರದ ಫಸ್ಟ್ ಲುಕ್, ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.