ವಿಚ್ಛೇದನ ವದಂತಿ ನಡುವೆಯೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಐಶ್ವರ್ಯಾ ರೈ; Post Goes Viral In Social Media

Aishwarya Rai
Published on

ಮುಂಬೈ: ಮಾಜಿ ವಿಶ್ವ ಸುಂದರಿ, ಬಾಲಿವುಡ್​ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಡಿವೋರ್ಸ್ (Divorce)​ ವಿಚಾರವಾಗಿ ಹೆಚ್ಚು ಸುದ್ದಿಯಾಗಿದ್ದ ಐಶ್ವರ್ಯಾ ರೈ ತೂಕದ ವಿಚಾರವಾಗೂ ಟ್ರೋಲ್​ ಆಗಿದ್ದರು. ಆದರೆ, ಅವರ ತೂಕ ಏರಿಕೆಯಾಗಿದ್ದರ ಹಿಂದೆ ವ್ಯಕ್ತಿಯೊಬ್ಬರು ಕಾರಣವನ್ನು ತಿಳಿಸಿದ್ದು, ಈ ಪೋಸ್ಟ್​ ಸಖತ್​ ವೈರಲ್ (Post Goes Viral)​ ಆಗುತ್ತಿದೆ.

ಸದಾ ಬ್ಯೂಟಿಯ ಕಡೆಗೆ ಹೆಚ್ಚು ಗಮನ ಕೊಡುವ ಐಶ್ವರ್ಯ ದಿನದಿಂದ ದಿನಕ್ಕೆ ತೂಕ ಏರಿಸಿಕೊಳ್ಳುತ್ತಲೇ ಇರುವುದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಲೋರಿಯಲ್‌ನ (Loreal) ಜಾಗತಿಕ ರಾಯಭಾರಿಯಾಗಿರುವ ಐಶ್ವರ್ಯಾ 2024ನೇ ಆವೃತ್ತಿಯ ಪ್ಯಾರಿಸ್​ ಫ್ಯಾಷನ್​ ವೀಕ್​ನಲ್ಲಿ (Paris Fashion Week) ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ನಟಿ ಕಾರ್ಯಕ್ರಮದಲ್ಲಿ ಧರಿಸಿದ್ದ ಕೆಂಪು ಬಟ್ಟೆ ಸಾಕಷ್ಟು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮ ರೆಡ್ಡಿಟ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ ಸಖತ್​ ವೈರಲ್​ ಆಗುತ್ತಿದೆ.

ನಾನು ಐಶ್ವರ್ಯ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಐಶ್ವರ್ಯಾ ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಡಯೆಟ್​ ಮಾಡುತ್ತಿಲ್ಲ, ಜೊತೆಗೆ ತೂಕ ಇಳಿಸಿಕೊಳ್ಳುವ ಯಾವುದೇ ಔಷಧಿಗಳನ್ನು ಆಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ನಾನು ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗಪಡಿಸುವುದಿಲ್ಲ ಎಂದು ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ.

ಈ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಡಿಲೀಟ್​ ಮಾಡಲಾಗಿದ್ದು, ಹೊಸ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಆದರೆ, ಐಶ್ವರ್ಯಾ ರೈ ಅವರ ಆರೋಗ್ಯದ ಕುರಿತಾದ ಪೋಸ್ಟ್​ಗೆ ಕುರಿತು ಅವರಾಗಲಿ ಅವರ ತಂಡವಾಗಲಿ ಈವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net