ಐಶ್ವರ್ಯ ಫಸ್ಟ್​ನೈಟ್​​ ದಿನ ಮಂಚವೇ ಮುರಿದು ಹೋಗಿತ್ತು; ಮಧುಚಂದ್ರದ ಅಜ್ಞಾತ ಸ್ಟೋರಿ ರಿವೀಲ್...

Aishwarya Rai
Published on

ಮುಂಬೈ; ಬಾಲಿವುಡ್​ನ ಕ್ಯೂಟ್​​ ಜೋಡಿಯಲ್ಲಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್​​  ​ಜೋಡಿ ಕೂಡಾ ಒಂದಾಗಿದೆ. ದಂಪತಿ ಸುಂದರ ಸಂಸಾರದಲ್ಲಿ ಎನೋ ಸರಿ ಇಲ್ಲ ಬೇರೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಮುನ್ನೆಲೆಗೆ ಬಂದಿತ್ತು. ಈ ಜೋಡಿ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಈ ಹಿಂದಿನ ಸಂದರ್ಶನದ ಸುದ್ದಿಯೊಂದು ವೈರಲ್​​ ಆಗುತ್ತಿದೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಬಾಲಿವುಡ್‌ನಲ್ಲಿ ಹೆಚ್ಚು ಮಾತನಾಡುವ ಜೋಡಿಗಳಲ್ಲಿ ಒಬ್ಬರು. ಈ ತಾರಾ ಜೋಡಿಯು 16 ವರ್ಷಗಳಿಗೂ ಹೆಚ್ಚು ಕಾಲ ದಾಂಪತ್ಯ ಜೀವನವನ್ನು ಆನಂದಿಸುತ್ತಿದೆ. ಅವರ ಮಧುಚಂದ್ರದ ಅಜ್ಞಾತ ಕಥೆಯ ಸುದ್ದಿ ಇದೀಗ ವೈರಲ್​​ ಆಗುತ್ತಿದೆ.

Aishwarya Rai

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ 2007 ಏಪ್ರಿಲ್ 20ರಂದು ಕುಟುಂಬಸ್ಥರು ಹಾಗೂ ಸ್ನೇಹಿತರ ಮಧ್ಯೆ ಮದುವೆ ಆದರು. ಇತ್ತೀಚೆಗಷ್ಟೇ ಐಶ್ವರ್ಯಾ ತಮ್ಮ ಹನಿಮೂನ್ ಬಗ್ಗೆ ಬಿಗ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಇದು ಅನೇಕರಿಗೆ ತಿಳಿದಿರಲಿಲ್ಲ.

ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈ, ನಾನು ಮತ್ತೆ ಅಭಿಷೇಕ್​​ ಫಸ್ಟ್​ನೈಟ್​​ ದಿನ ಮಂಚ ಮುರಿದು ಹೋಗಿತ್ತು. ತಮ್ಮ ಹನಿಮೂನ್‌ನ ಮೊದಲ ರಾತ್ರಿಯಂದು ಅಭಿಷೇಕ್ ಹಾಸಿಗೆಯಿಂದ ಎಲ್ಲಾ ಸ್ಕ್ರೂಗಳನ್ನು ತೆಗೆದಿದ್ದರು. ಈ ವಿಚಾರ ನನಗೆ ತಿಳಿದಿರಲಿಲ್ಲ. ನಾನು ಬೆಡ್ ಮೇಲೆ ಕುಳಿತ ತಕ್ಷಣ ಕುಸಿದು ಬಿದ್ದಿದ್ದೇನೆ. ಈ ಘಟನೆಯ ನಂತರ ನನಗೆ ತುಂಬಾ ಕೋಪ ಬಂದಿತ್ತು. ಸ್ವಲ್ಪ ಸಮಯ ಅಭಿಷೇಕ್ ಬಚ್ಚನ್ ಜೊತೆ ಮಾತನಾಡಲಿಲ್ಲ. ನಂತರ ಪರಿಸ್ಥಿತಿ ಸಹಜವಾಯಿತು ನಂತ್ರ ಮಾತನಾಡಿದೆ ಎಂದಿದ್ದಾರೆ.

ಆದರೆ ಈ ಘಟನೆಯನ್ನು ಎಂದಿಗೂ ಮರೆಯುವುದಿಲ್ಲ. ನಾವಿಬ್ಬರು ತಮ್ಮ ಹನಿಮೂನ್ ಅನ್ನು ತುಂಬಾ ಆನಂದಿಸಿದ್ದೇವೆ. ಈ ದಿನವನ್ನು ಮರೆಯಲು ಸಾಧ್ಯವಿಲ್ಲ ಎಂದು ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

ಅಮಿತಾಬ್ ಬಚ್ಚನ್‌ನಿಂದ ಹಿಡಿದು ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅವರ ಕುಟುಂಬಗಳು, ಅಭಿಮಾನಿಗಳು ವಿವಿಧ ಮಾಹಿತಿಗಳನ್ನು ವಿಶೇಷವಾಗಿ ತಿಳಿಯದ ಘಟನೆಗಳನ್ನು ತಿಳಿದುಕೊಳ್ಳುವ ಕುತೂಹಲಕ್ಕೆ ಕೊರತೆಯಿಲ್ಲ.

ಪ್ರಸ್ತುತ ಅಭಿಷೇಕ್ ಮತ್ತು ಐಶ್ವರ್ಯಾ ಅವರಿಗೆ ಆರಾಧ್ಯ ಎಂಬ ಮಗಳಿದ್ದಾಳೆ. ಅಭಿಷೇಕ್ ಮತ್ತು ಐಶ್ವರ್ಯಾ ತಮ್ಮ ಮಗಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಬಚ್ಚನ್ ಕುಟುಂಬ ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net