ವಿಮಾನ ದುರಂತ; ಮೃತರ ಕುಟುಂಬಗಳಿಗೆ ತಕ್ಷಣಕ್ಕೆ ಹೆಚ್ಚುವರಿಯಾಗಿ 25 ಲಕ್ಷ ರೂ.ಬಿಡುಗಡೆ: ಏರ್​​ ಇಂಡಿಯಾ ಹೇಳಿಕೆ | Plane Crash

dk - 2025-06-14T191836.222
Published on

Plane Crash: ಅಹಮದಾಬಾದ್​​ ವಿಮಾನ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಮತ್ತು ಬದುಕುಳಿದವರಿಗೆ ತಕ್ಷಣದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಉದ್ದೇಶದಿಂದ 25 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಅಲ್ಲದೆ, ಈಗಾಲೇ ಘೋಷಿಸಿದ 1 ಕೋಟಿ ರೂ. ಪರಿಹಾರದ ಜತೆಗೆ ಹೆಚ್ಚುವರಿಯಾಗಿ ಈ 25 ಲಕ್ಷ ರೂ. ಇರುತ್ತದೆ ಎಂದು ಏರ್​ ಇಂಡಿಯಾ ಹೇಳಿದೆ.

ಈ ಕುರಿತು ತನ್ನ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿರುವ ಏರ್​ ಇಂಡಿಯಾ,'' ಇತ್ತೀಚಿನ ಅಪಘಾತದಲ್ಲಿ ದುರಂತವಾಗಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಗಳೊಂದಿಗೆ ಏರ್ ಇಂಡಿಯಾ ಒಗ್ಗಟ್ಟಿನಿಂದ ನಿಲ್ಲುತ್ತದೆ. ತಕ್ಷಣದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಉದ್ದೇಶದಿಂದ 25 ಲಕ್ಷ ರೂ. ಬಿಡುಗಡೆ ಮಾಡಲಾಗುವುದು'' ಎಂದು ಹೇಳಿದೆ.

ಏರ್​ ಇಂಡಿಯಾ ಹೇಳಿದ್ದೇನು..?

ಇತ್ತೀಚಿನ ಅಪಘಾತದಲ್ಲಿ ದುರಂತವಾಗಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಗಳೊಂದಿಗೆ ಏರ್ ಇಂಡಿಯಾ ಒಗ್ಗಟ್ಟಿನಿಂದ ನಿಲ್ಲುತ್ತದೆ. ಈ ನಂಬಲಾಗದಷ್ಟು ಕಷ್ಟಕರ ಸಮಯದಲ್ಲಿ ಆರೈಕೆ ಮತ್ತು ಬೆಂಬಲವನ್ನು ನೀಡಲು ನಮ್ಮ ತಂಡಗಳು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿವೆ.

ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿ, ಏರ್ ಇಂಡಿಯಾ ಮೃತರ ಕುಟುಂಬಗಳಿಗೆ ಮತ್ತು ಬದುಕುಳಿದವರಿಗೆ ತಕ್ಷಣದ ಆರ್ಥಿಕ ಅಗತ್ಯಗಳನ್ನು ಪೂರೈಸಲು 25 ಲಕ್ಷ ಅಥವಾ ಸುಮಾರು 21,000 GBP ಮಧ್ಯಂತರ ಪಾವತಿಯನ್ನು ಒದಗಿಸಲಿದೆ. ಇದು ಟಾಟಾ ಸನ್ಸ್ ಈಗಾಗಲೇ ಘೋಷಿಸಿರುವ 1 ಕೋಟಿ ರೂ ಪರಿಹಾರದ ಜತೆ ಇರುತ್ತದೆ. ಏರ್ ಇಂಡಿಯಾದಲ್ಲಿರುವ ನಾವೆಲ್ಲರೂ ಈ ನಷ್ಟದಿಂದ ತೀವ್ರವಾಗಿ ದುಃಖಿತರಾಗಿದ್ದೇವೆ ಎಂದು ಎಕ್ಸ್​​ನಲ್ಲಿ ಪೋಸ್ಟ್​​ ಮಾಡಿದೆ.

ಜೂ.12ರ ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ (AI-171) ವಿಮಾನವು ಮೇಘನಿನಗರದಲ್ಲಿರುವ ವೈದ್ಯಕೀಯ ಹಾಸ್ಟೆಲ್ ಮತ್ತು ಅದರ ಕ್ಯಾಂಟೀನ್ ಸಂಕೀರ್ಣಕ್ಕೆ ಅಪ್ಪಳಿಸಿತು. ಈ ಅಪಘಾತದಲ್ಲಿ ಒಟ್ಟು 270 ಜನರು ಸಾವನ್ನಪ್ಪಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net