ಕ್ಷಣಾರ್ಧದಲ್ಲೇ ತಪ್ಪಿತು ಏರ್​ ಇಂಡಿಯಾ-ನೇಪಾಳ ಏರ್​ಲೈನ್ಸ್​ ನಡುವಿನ ದುರಂತ; ಮೂವರು ವಾಯು ಸಂಚಾರ ನಿಯಂತ್ರಕರು ಅಮಾನತು

New Project (5)
Published on

ಕಠ್ಮಂಡು: ಏರ್​ ಇಂಡಿಯಾ-ನೇಪಾಳ ಏರ್​ಲೈನ್ಸ್​ ನಡುವಿನ ದುರಂತ ಪೈಲಟ್​ಗಳ ಸಮಯ ಪ್ರಜ್ಷೆಯಿಂದ ಕ್ಷಣಾರ್ಧದಲ್ಲೇ ತಪ್ಪಿದ್ದು ದೊಡ್ಡ ದುರಂತದಿಂದ ಪಾರಾಗಲಾಗಿದೆ.

ಶುಕ್ರವಾರ ಬೆಳ್ಳಗೆ ದೆಹಲಿಯಿಂದ ಕಾಟ್ಮಂಡು ಕಡೆಗೆ ಹೋಗುತ್ತಿದ್ದ ಏರ್​ ಇಂಡಿಯಾ ವಿಮಾನವು, ಕೌಲಲಾಂಪುರದಿಂದ ಕಾಟ್ಮಂಡು ಕಡೆಗೆ ಬರುತ್ತಿದ್ದ ನೇಪಾಳ ಏರ್​ಲೈನ್ಸ್​​​ಗೆ ಸೇರಿದ್ದ A-320 ವಿಮಾನದ ನಡುವೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ.

ಏರ್​ ಇಂಡಿಯಾ ವಿಮಾನವು 19,000 ಅಡಿ ಅಂತರದಲ್ಲಿ ಹಾರುತ್ತಿದ್ದ ಸಮಯದಲ್ಲಿ ನೇಪಾಳ ಏರ್​​ಲೈನ್ಸ್​ ವಿಮಾನವು 15,000 ಅಡಿ ಅಂತರದಲ್ಲಿ ಹಾರಾಡುತ್ತಿತ್ತು ಎಂದು ತಿಳಿದು ಬಂದಿದೆ. ಎರಡು ವಿಮಾನಗಳು ಹತ್ತಿರದಲ್ಲಿರುವ ಬಗ್ಗೆ ರಾಡಾರ್​ನಲ್ಲಿ ತೋರಿಸಿದ ಕಾರಣ ನೇಪಾಳ ಏರ್​​ಲೈನ್ಸ್​ ವಿಮಾನವು 7,000 ಅಡಿಗಳಿಗೆ ಕೆಳಗಿಳಿಯಿತ್ತು ಮತ್ತು ದುರಂತ ತಪ್ಪಿತ್ತು ಎಂದು ನೇಪಾಳ ನಾಗರೀಕ ವಿಮಾನಯಾನ ಪ್ರಾಧಿಕಾರ(CAAN)ದ ವಕ್ತಾರರು ತಿಳಿಸಿದ್ಧಾರೆ.

ಘಟನೆ ಸಂಬಂಧ CAAN ತನಿಖೆಗೆ ಆದೇಶಿಸಿದ್ದು ನಿಯಂತ್ರಣ ಕೊಠಡಿಯ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದಾಗಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net