

ಅಮೆರಿಕ: ರಕ್ತದಾನವನ್ನು ಮಹಾದಾನವಾಗಿದೆ. ಇಲ್ಲೊಬ್ಬಳು 80 ವರ್ಷದ ವೃದ್ಧೆ 203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಈ ವೃದ್ಧೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
80 ವರ್ಷದ ಜೋಸೆಫೀನ್ ಮಿಚಾಲುಕ್ ಎಂಬ ವೃದ್ಧೆ O+ ರಕ್ತದ ಗುಂಪನ್ನು ಹೊಂದಿದ್ದಾರೆ. ಇವರು ತನ್ನ ಜೀವಮಾನವಿಡೀ ರಕ್ತದಾನ ಮಾಡುತ್ತಲೇ ಬಂದಿದ್ದಾರೆ. ಜೋಸೆಫೀನ್ 1965ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ರಕ್ತದಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ, ಅವರು ಜನರ ಜೀವಗಳನ್ನು ಉಳಿಸಲು ಒಟ್ಟು 203 ಘಟಕಗಳನ್ನು ದಾನ ಮಾಡಿದರು. ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಗಳಿಸಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಡಾಟ್ ಕಾಮ್ ಪ್ರಕಾರ, ಹೆಚ್ಚು ರಕ್ತದಾನ ಮಾಡಿದ ಮಹಿಳೆ ಹಿಂದಿನ ದಾಖಲೆಯನ್ನು ಭಾರತದ ಮಧುರಾ ಅಶೋಕ್ ಕುಮಾರ್ ಹೊಂದಿದ್ದಾರೆ. ಅವರು ತಮ್ಮ ಜೀವನದಲ್ಲಿ 117 ಯುನಿಟ್ ದಾನ ಮಾಡಿದ್ದರು. ಜೋಸೆಫೀನ್ 1965 ರಲ್ಲಿ ರಕ್ತದಾನದ ಮಾಡಲು ಪ್ರಾರಂಭಿಸಿದರು. ಅಂದಿನಿಂದ, ಅವರು ಎಂದಿಗೂ ರಕ್ತದಾನ ಮಾಡುವುದನ್ನು ನಿಲ್ಲಿಸಲಿಲ್ಲ.
O+ ಸಾಮಾನ್ಯವಾಗಿ ಪ್ರಪಂಚದಾದ್ಯಂತದ ಆಸ್ಪತ್ರೆಗಲಲ್ಲಿ ಯಾವಾಗಲೂ ಹೆಚ್ಚಿನ ಬೇಡಿಕೆಯಲ್ಲಿರುವ ಬ್ಲಡ್ ಗ್ರೂಪ್ ಆಗಿದೆ. ಅಮೆರಿಕದ ಜನಸಂಖ್ಯೆಯ 37% ರಷ್ಟು ಮಂದಿಯ ಬ್ಲಡ್ ಗ್ರೂಪ್ ಮಾತ್ರ O+ ಆಗಿದೆ. USನಲ್ಲಿ ದಾನಿಯು ಉತ್ತಮ ಆರೋಗ್ಯದಲ್ಲಿದ್ದರೆ ರಕ್ತದಾನ ಮಾಡಲು ಯಾವುದೇ ಅಡ್ಡಿಯಿಲ್ಲ. ರಕ್ತದಾನಕ್ಕೆ ಇಲ್ಲಿ ವಯಸ್ಸಿನ ಮಿತಿಯಿಲ್ಲ. ಆದರೆ ಆಕೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ಪ್ರತಿ ಬ್ಲಡ್ ಡೊನೇಷನ್‌ಗೂ ಮೊದಲು ತಪಾಸಣೆ ಮತ್ತು ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.