ಸಿಬ್ಬಂದಿ ಮೇಲೆ ಹಲ್ಲೆ; ಲಂಡನ್​ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್​

air india
Published on

ನವದೆಹಲಿ: ಪ್ರಯಾಣಿಕ ಓರ್ವ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾರಣ ಲಂಡನ್​ ಕಡೆಗೆ ಹೊರಟಿದ್ದ ಏರ್​ ಇಂಢಿಯಾ ವಿಮಾನವು ದೆಹಲಿಗೆ ವಾಪಸ್ ಆಗಿರುವ ಘಟನೆ ಸೋಮವಾರ ನಡೆದಿದೆ.

ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಟೇಕ್​ ಆಪ್​ ಆದ ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರೊಬ್ಬರು ಇಬ್ಬರು ಸಿಬ್ಬಂದಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಕಾರಣ ವಿಮಾನವನ್ನು ವಾಪಸ್​ ದೆಹಲಿಯಲ್ಲಿ ಲ್ಯಾಂಡ್​​ ಮಾಡಲಾಯಿತು ಎಂದು ಏರ್​ ಇಂಡಿಯಾ ವಿಮಾನ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಎಚ್ಚರಿಕೆಗೆ ಬಗ್ಗದ ಪ್ರಯಾಣಿಕ

ವಿಮಾನದ ಸಿಬ್ಬಂದಿ ಮೌಖಿಕವಾಗಿ, ಲಿಖಿತವಾಗಿ ಎಚ್ಚರಿಕೆ ನೀಡಿದರೂ ಸಹ ಪ್ರಯಾಣಿಕ ಅದಕ್ಕೆ ಬೆಲೆ ಕೊಡದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಗಮನಿಸಿದ ಪೈಲಟ್​ ಇನ್​ ಕಮಾಂಡ್​ ವಿಮಾನವನ್ನು ವಾಪಸ್​ ದೆಹಲಿ ಕಡೆಗೆ ತಿರುಗಿಸಲಾಯಿತು.

ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆದ ನಂತರ ಆರೋಪಿ ಜಸ್​ಕೀರಾತ್​ನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು ಪ್ರಕರಣದ ಸಂಬಂಧ FIR ದಾಖಲಾಗಿದೆ ಎಂದು ಏರ್​ ಇಂಡಿಯಾ ತಿಳಿಸಿದೆ.

ಮಾನಸಿಕ ಅಸ್ವಸ್ಥ

ವಿಮಾನ ಸಿಬ್ಬಂದಿ ಮೇಲೆ ಹ್ಲಲೆ ಕುರಿತು ಪ್ರತಿಕ್ರಿಯಿಸಿರುವ ಜಸ್​ಕೀರಾತ್​ ಕುಟುಂಬಸ್ಥರು ಆತ ಮಾನಸಿಕ ಅಸ್ವಸ್ಥನಾಗಿದ್ದು ಘಟನೆ ಕುರಿತು ವಿಷಾದಿಸಿ ಕ್ಷಮಾಪಣೆ ಕೋರಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ನಾಹರೀಕ ವಿಮಾನಯಾಣ ನಿರ್ದೇಶನಾಲಯ(DBCA) ಏರ್ ಇಂಡಿಯಾ ವಿಮಾನದಲ್ಲಿ ಘಟನೆ ನಡೆದಿದ್ದು ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net