More

    ಸರ್ಕಾರಿ ಆಸ್ಪತ್ರೆ ಎಡವಟ್ಟು; ಬದುಕಿದ್ದ ಮಗುವಿಗೆ ಡೆತ್‌ ಸರ್ಟಿಫಿಕೇಟ್..‌ಶವ ಸಂಸ್ಕಾರದ ವೇಳೆ ಉಸಿರಾಡಿದ ಮಗು!

    ಪಶ್ಚಿಮ ಬಂಗಾಳ: ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬದುಕಿದ್ದ ನವಜಾತ ಶಿಶುವಿಗೆ ಮರಣ ಪ್ರಮಾಣಪತ್ರವನ್ನು ನೀಡಿ ಎಡವಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ.

    ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಟಾಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗಾರ್ಬೆಟರ್ ಪಟ್ಟಣದ ಕುಟುಂಬಕ್ಕೆ ಮಗುವಿನ ಮರಣ ಪ್ರಮಾಣಪತ್ರವನ್ನು ಆಸ್ಪತ್ರೆ ನೀಡಿದೆ. ನವಜಾತ ಶಿಶು ಸಾವನ್ನಪ್ಪಿದೆ ಎಂದು ಇದರಲ್ಲಿ ಹೇಳಲಾಗಿದೆ. ಸುದ್ದಿ ತಿಳಿದ ಕುಟುಂಬದವರು ಎರಡು ದಿನದ ಮಗುವಿನ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.

    ಶವಸಂಸ್ಕಾರಕ್ಕೆ ಕೊಂಡೊಯ್ಯುವಾಗ ನವಜಾತ ಶಿಶು ಚಲಿಸಿ ಉಸಿರಾಡುತ್ತಿರುವುದನ್ನು ಕಂಡು ಮನೆಯವರು ಬೆಚ್ಚಿಬಿದ್ದರು. ಅದರ ನಂತರ, ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸ್ವಲ್ಪ ಸಮಯದ ನಂತರ ಮಗು ಸಾವನ್ನಪ್ಪಿತು.

    ಇದನ್ನೂ ಓದಿ:  VIDEO | ಮಲ್ಲಿಗೆ ಹೂವಿನ ಸ್ಕರ್ಟ್​​ ತೊಟ್ಟು ಕಾಣಿಸಿಕೊಂಡ ಉರ್ಫಿ ಜಾವೇದ್! 
    ಏಪ್ರಿಲ್ 7 ರಂದು ಜನಿಸಿದ ಅವರು ಏಪ್ರಿಲ್ 8 ರಂದು ಸಂಜೆ 5 ಗಂಟೆಗೆ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದರು. ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತನ್ನ ಮಗುವನ್ನು ಕೊಲೆ ಮಾಡಲಾಗಿದೆ ಎಂದು ಮೃತ ಮಗುವಿನ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
    ವೈದ್ಯಕೀಯ ನಿರ್ಲಕ್ಷ್ಯದ ವಿರುದ್ಧವಾಗಿ ಕುಟುಂಬ ಸದಸ್ಯರು ಶನಿವಾರ ಸಂಜೆಯಿಂದ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು. “ಜೀವಂತ ವ್ಯಕ್ತಿ ಸತ್ತಿದ್ದಾನೆ ಎಂದು ವೈದ್ಯರು ಹೇಗೆ ಘೋಷಿಸುತ್ತಾರೆ” ಎಂದು ಕುಟುಂಬದವರು ಪ್ರಶ್ನಿಸಿದ್ದಾರೆ.

    ರಾಮ ರಾಜ್ಯದ ಕನಸಿಗೆ ಪೂರಕ ಪ್ರಣಾಳಿಕೆ ಸಿದ್ಧವಾಗಲಿದೆ: ಸಚಿವ ಡಾ. ಕೆ.ಸುಧಾಕರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts