More

    ಮೀನು ಹಿಡಿಯುವ ವೇಳೆ ಮೊಸಳೆ ದಾಳಿ; ವ್ಯಕ್ತಿ ಎಸ್ಕೇಪ್​ ಆಗಿದ್ದೆ ರೋಚಕ

    ಕ್ವೀನ್ಸ್​​ಲ್ಯಾಂಡ್​: ಮೀನು ಹಿಡಿಯುವ ವೇಳೆ ಮೊಸಳೆಯೊಂದು ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ಮಾಡಿದ್ದು ಆತ ತನ್ನನು ತಾನು ರಕ್ಷಿಸಿಕೊಳ್ಳಲು ಮೊಸಳೆಯ ಕಣ್ಣಿಗೆ ತಿವಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಆಸ್ಟ್ರೇಲಿಯಾದ ನಾರ್ಥ್​​ ಕ್ವೀನ್ಸ್​ಲ್ಯಾಂಡ್​ನಲ್ಲಿ ನಡೆದಿದೆ.

    ಸುಮಾರು 4.5 ಮೀಟರ್​ ಉದ್ದ ಇರುವ ಮೊಸಳೆಯೂ 45 ವರ್ಷದ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು ಆತ ಬಚಾವ್​ ಆಗಲು ಸರಿಯಾದ ಉಪಾಯ ಮಾಡಿದ್ದಾನೆ ಎಂದು ನೆಟ್ಟಿಗರು ಶ್ಲಾಘಿಸಿದ್ಧಾರೆ.

    ಮೀನು ಹಿಡಿಯುವ ವೇಳೆ ಘಟನೆ

    ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ವ್ಯಾಲೇರಿ ನೋಬೆಲ್​ ಶನಿವಾರ ಮಧ್ಯಾಹ್ನ ಆರ್ಚರ್​ ಪಾಯಿಂಟ್​ನ ಕುಕ್​ಟೌನ್​ನಲ್ಲಿ ಘಟನೆ ನಡೆದಿದ್ದು ಮೀನು ಹಿಡಿಯುವ ವೇಳೆ ಆತ ಮೊಸಳೆ ತನ್ನತ್ತ ಬರುವುದನ್ನು ಗಮನಿಸಿದ್ಧಾನೆ. ಈ ವೇಳೆ ಮೀನು ಹಿಡಿಯುವ ಗಾಳದಿಂದ ಮೊಸಳೆಯನ್ನು ಒಡಿಸಲು ಪ್ರಯತ್ನಿಸಿದ್ದಾನೆ.

    ಮೀನು ಹಿಡಿಯುವ ವೇಳೆ ಮೊಸಳೆ ದಾಳಿ; ವ್ಯಕ್ತಿ ಎಸ್ಕೇಪ್​ ಆಗಿದ್ದೆ ರೋಚಕ

    ಇದನ್ನೂ ಓದಿ: ಶಬ್ಧ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಗೆ ಗುಂಡೇಟು ಪ್ರಕರಣ; ಗರ್ಭಿಣಿ ಮೃತ್ಯು

    ಆದರೆ, ಅದು ಹೆದರದೆ ಆತನ ಮೇಲೆ ದಾಳಿ ಮಾಡಿದೆ. ಮೊಸಳೆ ದಾಳಿಯಿಂದ ವ್ಯಕ್ತಿ ತೀವ್ರವಾಗಿ ಘಾಯಗೊಂಡಿದ್ದು ಆತನಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯ ವ್ಯಾಲೇರಿ ನೋಬೆಲ್​ ತಿಳಿಸಿದ್ಧಾರೆ.

    ಗಂಭೀರ ಗಾಯ

    ಮೊಸಳೆ ದಾಳಿಯಿಂದ ವ್ಯಕ್ತಿಯ ತಲೆ, ಕಾಲು, ಭುಜದಲ್ಲಿ ಗಂಭೀರ ಗಾಯಗಳಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿಗೆ ಒಳಗಾಗಿರುವ ವ್ಯಕ್ತಿಯ ಆರೋಗ್ಯವನ್ನು ವಿಚಾರಿಸಲಿದ್ದಾರೆ ಮತ್ತು ದಾಳಿ ನಡೆದ ಜಾಗದ ಸುತ್ತ ಮುತ್ತ ಮೊಸಳೆ ಇದೆಯಾ ಎಂಬುದನ್ನು ಪರಶೀಲಿಸಲಿದ್ದಾರೆ ಎಂದು ಅರಣ್ಯ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

    ನಿಮ್ಮ ರಕ್ಷಣೆಗೆ ನೀವೇ ಜವಾಬ್ದಾರರು

    ಆರ್ಚರ್​​​​​​ ಪಾಯಿಂಟ್​ನಲ್ಲಿ ಈ ಮೊದಲಿನಿಂದಲೂ ಮೊಸಳೆಗಳ ಹಾವಳಿ ಹೆಚ್ಚಿದೆ ಎಂದು ನಾವು ಎಚ್ಚರಿಸುತ್ತಾ ಬಂದಿದ್ದೇವೆ ಅದನ್ನು ಮಿರಿ ಯಾರಾದರೂ ಅಲ್ಲಿ ಮೀನು ಹಿಡಿಯಲು ಹೋದರೆ ಅವರ ರಕ್ಷಣೆಗೆ ಅವರೇ ಜವಾಬ್ದಾರರು ಎಂದು ಅರಣ್ಯ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

    2020ರಿಂದ 2023 ಮಾರ್ಚ್​​ ವರೆಗೂ ಒಟ್ಟಾರೆಯಾಗಿ 8 ಬಾರಿ ಮೊಸಳೆ ದಾಳಿ ಮಾಡಿದ್ದು ಇದರಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕ್ವೀನ್ಸ್​​ಲ್ಯಾಂಡ್​ ಸರ್ಕಾರ ಬಿಡುಗಡೆ ಮಾಡಿರುವ ಡೇಟಾದಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts