

Air Force Jet Crashes: ದೈನಂದಿನ ತರಬೇತಿ ನಡೆಸುತ್ತಿದ್ದ ವೇಳೆ ಭಾರತೀಯ ವಾಯುಸೇನೆಯ ಐಎಎಫ್ ಮಿರಾಜ್-2000 ಯುದ್ಧ ವಿಮಾನ ಮಹಾರಾಷ್ಟ್ರದ ಶಿವಪುರಿ ಬಳಿ ಗುರುವಾರ ಪತನಗೊಂಡಿದೆ.
ಎರಡು ಸೀಟ್ಗಳುಳ್ಳ ಈ ಯುದ್ಧ ವಿಮಾನವು ಎಂದಿನ ತರಬೇತಿ ಅಭ್ಯಾಸ ಮಾಡುತ್ತಿದ್ದಾರೆ ಘಟನೆ ನಡೆದಿದೆ. ವಿಮಾನದಲ್ಲಿಸದ್ದ ಇಬ್ಬರು ಪೈಲಟ್ಗಳು ಸುರಕ್ಷಿತವಾಗಿ ಕೆಳಗೆ ಜಿಗಿದಿದ್ದಾರೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ವಿಮಾನ ಪತನದ ದೃಶ್ಯಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗಿವೆ. ಈ ಕುರಿತು ಪತನಕ್ಕೆ ಕಾರಣ ಏನು ಎಂಬುವುದನ್ನು ತಿಳಿಯಲು ನ್ಯಾಯಾಂಗ ತನಿಖೆಗೆ ಅದೇಶಿಸಲಾಗಿದೆ ಎಂದು ವಾಯುಸೇನ ಅಧಿಕಾರಿಗಳಿ ತಿಳಿಸಿದ್ದಾರೆ.(ಏಜೆನ್ಸೀಸ್)