ಎನ್​ಎಲ್​​ಯುಡಿ; ಎಐಎಲ್​ಇಟಿ ಸೆಪ್ಟೆಂಬರ್ 26 ಕ್ಕೆ

answer sheet
Published on

ದೆಹಲಿ: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ದೆಹಲಿ (ಎನ್‌ಎಲ್‌ಯುಡಿ), ಅಖಿಲ ಭಾರತ ಕಾನೂನು ಪ್ರವೇಶ ಪರೀಕ್ಷೆ (ಎಐಎಲ್ಇಟಿ) ದಿನಾಂಕವನ್ನು ಘೋಷಿಸಿದೆ.

ಸೆಪ್ಟೆಂಬರ್ 26 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12: 30 ರವರೆಗೆ ಪರೀಕ್ಷೆ ನಡೆಯಲಿದೆ.

ಎನ್‌ಎಲ್‌ಯುಡಿಯಲ್ಲಿ ಕಾನೂನು ಕೋರ್ಸ್‌ಗಳ ಪ್ರವೇಶಕ್ಕಾಗಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಎಐಎಲ್ಇಟಿಯನ್ನು ನಡೆಸುತ್ತದೆ. ಎನ್​​ಎಲ್​ಯುಡಿ ಹಾಗೂ ಎನ್​ಟಿಎ ವೆಬ್​ಸೈಟ್​​ನಲ್ಲಿ ಶೀಘ್ರವೇ ಹೆಚ್ಚಿನ ವಿವರಗಳನ್ನು ನೀಡಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net