

ನವದೆಹಲಿ: ಶಾಲೆಗಳು ಇನ್ನೂ ಆರಂಭವೇ ಆಗಿಲ್ಲ, ಆಧರೆ, ಬಹುತೇಕ ಶಿಕ್ಷಣ ಸಂಸ್ಥೆಗಳು ಪ್ರವೇಶ ಶುಲ್ಕವನ್ನು ಪಾವತಿಸಿ ಎಂದು ಪಾಕರಿಗೆ ದುಂಬಾಲು ಬಿದ್ದು ಹಣ ಪಡೆಯುತ್ತಿವೆ.
ಈ ನಡುವೆ, ದೆಹಲಿ ಹೈಕೋರ್ಟ್ ಶಾಲಾ ಶುಲ್ಕದ ವಿಚಾರವಾಗಿ ಮಹತ್ವದ ಉಲ್ಲೇಖವೊಂದನ್ನು ಮಾಡಿದೆ. ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಶಾಲೆಗಳು ಭೌತಿಕವಾಗಿ ಇನ್ನಷ್ಟೇ ಆರಂಭವಾಗಬೇಕಿದೆ. ಇಂಥ ಸಂದರ್ಭದಲ್ಲಿ ಶಾಲೆಯ ವಾರ್ಷಿಕ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕವನ್ನು ಪಡೆಯುವಂತಿಲ್ಲ ಎಂದು ನ್ಯಾಯಮೂರ್ತಿ ಜಯಂತ್ ನಾಥ್ ಆಗಸ್ಟ್ 25 ರಂದು ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಿದ್ದ ಅಂಶವನ್ನೇ ದೆಹಲಿ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ.
ಜುಲೈನಿಂದ ಅನ್ವಯಿಸುವಂತೆ ಶಾಲಾ ಆರಂಭದವರೆಗೂ ಈ ಎರಡೂ ಶುಲ್ಕಗಳನ್ನು ಪಡೆಯುವಂತಿಲ್ಲ ಎಂದು ಕೈಕೋರ್ಟ್ ಹೇಳಿದೆ. ಖಾಸಗಿ ಶಾಲೆಗಳ ಪಾಲಕರ ಸಂಘದ ವತಿಯಿಂದ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ವೇಳೆ ಇದನ್ನು ಹೇಳಿದೆ.
ಹೀಗಾಗಿ ಯಾವುದೇ ಶಾಲೆಗಳು ವಾರ್ಷಿಕ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕ ವಸೂಲಿ ಮಾಡುವುದಕ್ಕೆ ಅವಕಾಶವಿಲ್ಲವೆಂದು ತಿಳಿಸಿದೆ.ಲಾಕ್ಡೌನ್ ತೆರವು ಮಾಡಲಾಗಿದೆ. ಈ ಕಾರಣಕ್ಕೆ ಶುಲ್ಕ ಪಡೆಯಬಹುದು ಎಂದು ಖಾಸಗಿ ಶಾಲೆಗಳು ವಾದಿಸಿದ್ದವು.
ಈ ನಡುವೆ ದೆಹಲಿ ಸರ್ಕಾರದ ವಕೀಲರು ವಾದ ಮಂಡಿಸಿ, ಸರ್ಕಾರ ಏಪ್ರಿಲ್ 18ರಂದು ಆದೇಶ ಹೊರಡಿಸಿ, ಶಾಲೆಗಳು ವಾರ್ಷಿಕ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕ ಪಡೆಯದಂತೆ ನಿರ್ದೇಶನ ನೀಡಿದೆ. ಶಾಲೆಗಳು ಪುನರಾರಂಭವಾಗದ ಕಾರಣ ಈ ಆದೇಶ ಇನ್ನೂ ಜಾರಿಯಲ್ಲಿದೆ ಎಂದು ಸ್ಪಷ್ಪಡಿಸಿದರು. ಕೋರ್ಟ್ ಸೆಪ್ಟಂಬರ್ 16ಕ್ಕೆ ವಿಚಾರಣೆಯನ್ನು ಮುಂದೂಡಿತು.