ಮುಂದಿನ ದಿನಗಳಲ್ಲಿ ಮನುಷ್ಯರನ್ನೇ ಹಿಂದಿಕುತ್ತೇ ಇದು! ಭಯಾನಕ ಸಂಗತಿ ಬಿಚ್ಚಿಟ್ಟ AI ಗಾಡ್​ಫಾದರ್​

ವಿಜಯವಾಣಿ - 2025-08-03T164351.577
Published on

AI Godfather: ಪ್ರಸ್ತುತ 5ಜಿ ಕಾಲದಲ್ಲಿರುವ ಜನರಿಗೆ 10ಜಿ ಕಾಲವನ್ನು ಈಗಲೇ ಕಣ್ಣು ಮುಂದಿಟ್ಟಿರುವ ಕೃತಕ ಬುದ್ಧಿಮತ್ತೆ, ಭವಿಷ್ಯದಲ್ಲಿ ಮನುಷ್ಯನಿಗೆ ಭಾರೀ ಪೈಪೋಟಿ ಕೊಡಲಿದೆ ಎಂಬುದರಲ್ಲಿ ಅನುಮಾನವೇ ಬೇಡ. ಅಸಲಿಗೆ, ಎಐ ಟೆಕ್ನಾಲಜಿಗಳು ಮಾನವನಿಗೆ ಪೈಪೋಟಿ ಕೊಡುತ್ತದೆ ಅನ್ನೋದರ ಬದಲಿಗೆ ಮಾನವ ಕುಲಕ್ಕೆ ಸಂಕಷ್ಟ ತಂದಿಡಲಿದೆ ಎಂದೇ ಹೇಳಬಹುದು. ಇದಕ್ಕೆ ಇತ್ತೀಚಿನೆ ಬೆಳವಣಿಗೆಗಳೇ ಜ್ವಲಂತ ಸಾಕ್ಷಿ.

ಒಂದಷ್ಟು ನಮ್ಮ ದೈನಂದಿನ ಕೆಲಸಗಳನ್ನು ಸುಲಭಗೊಳಿಸಿರುವ ಎಐ, ಬಹುತೇಕ ವಿಚಾರಗಳಲ್ಲಿ ಮಾನವನಿಗೆ ತೊಡಕು ಉಂಟುಮಾಡುತ್ತಿದೆ. ಅದರಲ್ಲೂ ಜೀವನೋಪಾಯಕ್ಕೆ ಕೊಡಲಿಪೆಟ್ಟು ಹಾಕಿದೆ. ಕೆಲವರ ಜೀವಕ್ಕೂ ಕುತ್ತು ತಂದಿಟ್ಟಿದೆ. ಶರವೇಗದಲ್ಲಿ ಸಾಗುತ್ತಿರುವ ಎಐ ಟೆಕ್ನಾಲಜಿಗೆ ಒಗ್ಗಿಕೊಂಡಿರುವ ಪ್ರತಿಷ್ಠಿತ ಟೆಕ್ ಕಂಪನಿಗಳು, ಈಗಾಗಲೇ ತನ್ನ ಸಾವಿರಾರೂ ಉದ್ಯೋಗಿಗಳಿಗೆ ಗೇಟ್​ಪಾಸ್​ ಕೊಟ್ಟಿವೆ. ಅದೂ ಕೃತಕ ಬುದ್ಧಿಮತ್ತೆಯಿಂದ ಎಂಬುದು ಸದ್ಯ ಚಿಂತಿಸುವ ವಿಷಯ. ಇಷ್ಟೇ ಅಲ್ಲ, ಭವಿಷ್ಯದಲ್ಲಿ ಅನಿರೀಕ್ಷಿತ ಸಮಸ್ಯೆಗಳನ್ನು ಇದು ತಂದೊಡ್ಡಬಹುದು ಎಂಬ ಭಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಈ ಮಾತುಗಳ ಬೆನ್ನಲ್ಲೇ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಎಐ ಗಾಡ್‌ಫಾದರ್ ಜೆಫ್ರಿ ಹಿಂಟನ್ ಬೆಚ್ಚಿಬೀಳಿಸೋ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

'ಒನ್ ಡಿಸಿಷನ್' ಪಾಡ್‌ಕ್ಯಾಸ್ಟ್‌ನಲ್ಲಿ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿರುವ ಅವರು, "ಭವಿಷ್ಯದಲ್ಲಿ ಎಐ ಮಾನವರಿಗೆ ಅರ್ಥವಾಗದ ಆಂತರಿಕ ಭಾಷೆಯನ್ನು ಅಭಿವೃದ್ಧಿಪಡಿಸಬಹುದು. ಕೃತಕ ಬುದ್ಧಿಮತ್ತೇ ವ್ಯವಸ್ಥೆಗಳು ಇಂಗ್ಲಿಷ್‌ನಲ್ಲಿ 'ಚೈನ್ ಆಫ್ ಥಾಟ್' ತಾರ್ಕಿಕತೆಯನ್ನು ಮಾಡುತ್ತಿವೆ. ಇದರಿಂದ, ನಾವು ಅವು ಏನು ಮಾಡುತ್ತಿವೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಆದರೆ, ಮುಂದಿನ ದಿನಗಳಲ್ಲಿ ತನ್ನದೇ ಆಂತರಿಕ ಭಾಷೆಯನ್ನು ಅವು ರೂಪಿಸಿಕೊಳ್ಳಬಹುದು. ಇದರಿಂದ, ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ" ಎಂದು ಎಚ್ಚರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net