'ಕಂಗುವ' ಚಿತ್ರಕ್ಕೆ ಒಂದಲ್ಲ, ಎರಡಲ್ಲ… AI ತಂತ್ರಜ್ಞಾನದಲ್ಲಿಯೂ ಮುಂದಿದೆ ಸೂರ್ಯ ನಟಿಸಿದ ಬಹುನಿರೀಕ್ಷಿತ ಸಿನಿಮಾ

kanguva
Published on

ತಮಿಳುನಾಡು: ತಮಿಳು ಚಿತ್ರನಟ ಸೂರ್ಯ ವಿಶೇಷ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕಂಗುವ' (Kanguva), ಇದೇ ನವೆಂಬರ್ 2024ರಂದು ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗುತ್ತಿದೆ. ಮುಂದಿನ ತಿಂಗಳಂದು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದ್ದೇ ಆದರೂ ದಿನಾಂಕ ಅಧಿಕೃತವಾಗಿ ನಿಗದಿಪಡಿಸಿಲ್ಲ (AI). ಶಿವ ನಿರ್ದೇಶನದ ಫ್ಯಾಂಟಸಿ ಚಿತ್ರ ಇದಾಗಿದ್ದು, ವಿಭಿನ್ನ ಕಾಲಾವಧಿಯನ್ನು ಹೊಂದಿದೆ. ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸಿದ್ದು, ವಿಲನ್ ಆಗಿ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಬಗ್ಗೆ ಹೆಚ್ಚೆಚ್ಚು ಮಾಹಿತಿ ತಿಳಿಯಲು ಬಹಳ ದಿನಗಳಿಂದ ಕುತೂಹಲ ವ್ಯಕ್ತಪಡಿಸುತ್ತಿದ್ದ ಅಭಿಮಾನಿಗಳಿಗೆ ಇದೀಗ ನಿರ್ಮಾಪಕರು ಹೊಸ ಅಪ್ಡೇಟ್​ಗಳನ್ನು ನೀಡಿದ್ದು, ಅದರಲ್ಲಿ ಹಲವಾರು ವಿಶೇಷತೆಗಳಿವೆ.

ಐಮ್ಯಾಕ್ಸ್​ನಲ್ಲಿ ತೆರೆ ಕಾಣುವುದಿಲ್ಲ 'ಕಂಗುವ'

ನಿರ್ಮಾಪಕರಾದ ಕೆ.ಇ. ಜ್ಞಾನವೇಲ್ ರಾಜಾ ಅವರು ಮಾತನಾಡಿ, ಸೂರ್ಯ ಅಭಿನಯದ 'ಕಂಗುವ' ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಕೆಲಸಗಳು ಸರಾಗವಾಗಿ ಸಾಗುತ್ತಿದೆ. ಸೂರ್ಯ ಅವರ ದ್ವಿಪಾತ್ರ ಖಂಡಿತ ನಿಮಗೆ ಇಷ್ಟವಾಗಲಿದ್ದು, ಸಿನಿಮಾವನ್ನು ಗ್ಯ್ರಾಂಡ್​ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಇದೇ ನವೆಂಬರ್​ 14ರಂದು ಚಿತ್ರವನ್ನು ಜಾಗತಿಕವಾಗಿ ರಿಲೀಸ್ ಮಾಡಲು ನಿರ್ಧರಿಸಿದ್ದೇವೆ. ಆದ್ರೆ, ಕಾದು ನೋಡಬೇಕು. ಚಿತ್ರದಲ್ಲಿರುವ ಸಾಂಗ್​ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ 3ಡಿ ಫಾರ್ಮೆಟ್​ನಲ್ಲಿ ಮೂಡಿಬರಲಿದೆ" ಎಂದು ಹೇಳಿದರು. ಈ ಹಿಂದಿನಿಂದಲೂ ಕಂಗುವ ಐಮ್ಯಾಕ್ಸ್​ನಲ್ಲಿ ತೆರೆಕಾಣಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದ್ರೆ, ಇದೀಗ ರಿಲೀಸ್ ಆಗಲ್ಲ ಎಂಬ ಸುದ್ದಿ ಸದ್ಯ ಸೂರ್ಯ ಫ್ಯಾನ್ಸ್​ಗಳಲ್ಲಿ ಅತೀವ ಬೇಸರ ಉಂಟಾಗಿದೆ.

ಸೂರ್ಯ ಬದಲಿಗೆ ಎಐ ಧ್ವನಿ

ಜಾಗತಿಕವಾಗಿ ಸುಮಾರು 3,500 ಸ್ಕ್ರೀನ್‌ಗಳಲ್ಲಿ ಕಂಗುವ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ಕೆ.ಇ. ಜ್ಞಾನವೇಲ್ ರಾಜಾ ಹೇಳಿದ್ದಾರೆ. ಚಿತ್ರವು ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಸೇರಿದಂತೆ ಎಂಟು ಭಾಷೆಗಳಲ್ಲಿ ತೆರೆಕಾಣಲಿದೆ. ಇತರೆ ಭಾಷೆಯ ಆವೃತ್ತಿಗಳಲ್ಲಿ ಸೂರ್ಯ ಅವರ ಧ್ವನಿಯನ್ನು ಬಳಸಿಕೊಳ್ಳದ ಚಿತ್ರತಂಡ ಇದೀಗ ನೇರವಾಗಿ ಅಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ತಮಿಳು ಬಿಟ್ಟು ಉಳಿದೆಲ್ಲಾ ಭಾಷೆಗಳನ್ನು AI ತಂತ್ರಜ್ಞಾನದಡಿ ರೂಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net