ಪಾಕಿಸ್ತಾನಕ್ಕೆ ಹೋಗಿ ಇಳಿಯಿತು ಇಂಡಿಗೋ ವಿಮಾನ!; ಕಾರಣ?

Indigo
Published on

ನವದೆಹಲಿ: ಇಂಡಿಗೋ ವಿಮಾನ ಪಾಕಿಸ್ತಾನಕ್ಕೆ ಹೋಗಿ ಇಳಿದ ಪ್ರಕರಣವೊಂದು ನಡೆದಿದೆ. ಶನಿವಾರ ರಾತ್ರಿ ಈ ಪ್ರಕರಣ ನಡೆದಿತ್ತು. ಅಮೃತಸರದಿಂದ ಹೊರಟಿದ್ದ ಇಂಡಿಗೋ 6ಇ-645 ವಿಮಾನ ಪಾಕಿಸ್ತಾನಕ್ಕೆ ಪ್ರವೇಶ ಮಾಡಿತ್ತು.

ಶನಿವಾರ ರಾತ್ರಿ 8 ಗಂಟೆಗೆ ಅಮೃತಸರದಿಂದ ಹೊರಟಿದ್ದ ಇಂಡಿಗೋ ವಿಮಾನ, 9.40ಕ್ಕೆ ಅಹಮದಾಬಾದ್​ಗೆ ಬಂದಿಳಿದಿದ್ದರೂ, ಈ ಮಧ್ಯೆ ಪಾಕಿಸ್ತಾನದ ವಾಯುನೆಲೆಯಲ್ಲಿ ಕೆಲಕಾಲ ಇದ್ದು ಬಂದ ಪ್ರಕರಣ ನಡೆದಿದೆ. ಈ ವಿಮಾನ ಪಾಕಿಸ್ತಾನಕ್ಕೆ ಪ್ರವೇಶ ಮಾಡಲು ಕಾರಣ ಏನು ಎಂಬುದನ್ನೂ​ ಇಂಡಿಗೋ ತಿಳಿಸಿದೆ.

ಅಮೃತಸರದಿಂದ ಅಹಮದಾಬಾದ್​ಗೆ ಹೊರಟಿದ್ದ​ ಇಂಡಿಗೋ 6ಇ-645 ವಿಮಾನ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಪಥ ಬದಲಿಸಿ ಪಾಕಿಸ್ತಾನದ ವಾಯುನೆಲೆಯಲ್ಲಿ ಕೆಲಕಾಲ ತಂಗಬೇಕಾಗಿತ್ತು ಎಂದು ಸಂಸ್ಥೆ ತಿಳಿಸಿದೆ.

ಈ ಹಾರಾಟ ಎರಡೂ ದೇಶಗಳ ಏರ್​ ಟ್ರಾಫಿಕ್ ಕಂಟ್ರೋಲ್ ನಿಗಾದಲ್ಲಿ ನಡೆದಿದ್ದು, ಸುಸೂತ್ರವಾಗಿ ಡೀವಿಯೇಷನ್​​ ತೆಗೆದುಕೊಳ್ಳಲಾಗಿದೆ. ಬಳಿಕ ಅಲ್ಲಿಂದ ಸುಗಮವಾಗಿ ಹೊರಟು ಅಹಮದಾಬಾದ್​ನಲ್ಲಿ ಲ್ಯಾಂಡ್ ಆಗಿದೆ ಎಂದು​ ಇಂಡಿಗೋ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net