ಮೆಕ್ಸಿಕೋದಲ್ಲೂ ಶ್ರೀರಾಮ ಪ್ರಾಣ ಪ್ರತಿಷ್ಠೆ

ರಾಮ ಮಂದಿರ
Published on

ಮೆಕ್ಸಿಕೋ: ಶತಮಾನಗಳ ಹೋರಾಟ ಮತ್ತು ಕಾಯುವಿಕೆ ಬಳಿಕ ಅಯೋಧ್ಯಾದಲ್ಲಿ ರಾಮಮಂದಿರದ ಕನಸು ಈಡೇರುತ್ತಿದೆ. ಸೋಮವಾರ ಮಧ್ಯಾಹ್ನ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ.

ಅಮೆರಿಕಾ, ಮೆಕ್ಸಿಕೋ, ಕೆನಡಾ ಮತ್ತು ಆಸ್ಟ್ರೇಲಿಯಾದ ದೇವಾಲಯಗಳಲ್ಲಿಯೂ ಸುಂದರಕಾಂಡ, ರಾಮಚರಿತಮಾನಗಳನ್ನು ಪಠಿಸಲಾಗುತ್ತಿದೆ. ಹಲವು ದೇಶಗಳು ಕೂಡ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೆಕ್ಸಿಕೋ ದೇಶದ ಮೊದಲ ರಾಮ ಮಂದಿರವನ್ನು ನಿರ್ಮಿಸಲಾಗಿದ್ದು, ಅಯೋಧ್ಯೆಗೂ ಮುನ್ನ ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನೆರವೇರಿವೆ. ಮೆಕ್ಸಿಕೋದಲ್ಲಿ ನಿರ್ಮಿಸಲಾದ ದೇವಾಲಯದಲ್ಲಿ ಭಾರತದಿಂದ ತಂದ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿದೆ. ಈ ಅವಧಿಯಲ್ಲಿ ಅನಿವಾಸಿ ಭಾರತೀಯರಿಂದ ಭಜನೆ, ಕೀರ್ತನೆ ಮತ್ತು ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸಮುದಾಯ ಹಾಗೂ ಮೆಕ್ಸಿಕೋ ನಾಗರಿಕರು ಭಾಗವಹಿಸಿದ್ದರು.

ಮೆಕ್ಸಿಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯು ದೇಶದ ಮೊದಲ ರಾಮ ಮಂದಿರ ಎಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಮೆಕ್ಸಿಕೋದಲ್ಲಿ ಮೊದಲ ರಾಮ ಮಂದಿರ! ಅಯೋಧ್ಯೆಯಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಮುನ್ನಾದಿನದಂದು, ಮೆಕ್ಸಿಕೋದ ಕ್ವೆರೆಟಾರೊ ನಗರವು ಮೊದಲ ಭಗವಾನ್ ರಾಮ ಮಂದಿರವನ್ನು ನಿರ್ಮಿಸಲಾಗಿದೆ. ಕ್ವೆರೆಟಾರೊ ಮೊದಲ ಭಗವಾನ್ ಹನುಮಾನ್ ದೇವಾಲಯವನ್ನು ಸಹ ಆಯೋಜಿಸುತ್ತದೆ ಎಂದು ಹೇಳಿದೆ.

ರಾಮಮಂದಿರದ 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಸೋಮವಾರ ಸುಮಾರು 5 ಗಂಟೆ ಮೋದಿ ಅವರು ಅಯೋಧ್ಯೆಯಲ್ಲಿಯೇ ಕಾಲ ಕಳೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net