More

    ರಾಮಮಂದಿರ ಉದ್ಘಾಟನೆ: ಮುಸ್ಲಿಂ, ಕ್ರಿಶ್ಚಿಯನ್ನರು ವಿಶೇಷ ಪೂಜೆ, ಪ್ರಾರ್ಥನೆ ಮಾಡಲಿ

    ಗುವಾಹಟಿ: ರಾಮ ಮಂದಿರದಲ್ಲಿ ಜನವರಿ 22ರಂದು ರಾಮ ಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಮುಖಂಡರ ಪಾಲ್ಗೊಳ್ಳುವಿಕೆಯೊಂದಿಗೆ ಈ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ.

    ಇದನ್ನೂ ಓದಿ:ಶ್ರೀರಾಮ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಭಾಗವಹಿಸುತ್ತಿಲ್ಲ, ಯಾಕೆ ಗೊತ್ತಾ ?

    ರಾಮ ಮಂದಿರ ಉದ್ಘಾಟನೆ ಕೇವಲ ಹಿಂದೂಗಳ ವಿಜಯವಲ್ಲ, ಇದು ದೇಶದ ಎಲ್ಲಾ ಸಮುದಾಯ ಜನರ ಗೆಲುವುವಾಗಿದೆ. ಸೋಮವಾರ (ನಾಳೆ) ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ಪುಣ್ಯಸ್ಥಳ ಅಯೋಧ್ಯೆ. ಭಾರತೀಯ ಪೂಜಾ ಸ್ಥಳವನ್ನು ಒಡೆದ ಬಾಬರ್ ಆಕ್ರಮಣಕಾರನಾಗಿದ್ದನು ಎಂದು ಟೀಕಿಸಿದರು.

    ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಮಹಾ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಅಯೋಧ್ಯೆ ಸಿದ್ಧವಾಗುತ್ತಿದ್ದಂತೆ, ಅಸ್ಸಾಂನ ಬಿಜೆಪಿ ಸರ್ಕಾರ ನಾಳೆ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ರಜೆ ಘೋಷಿಸಿದೆ. ಇವುಗಳಲ್ಲಿ ಖಾಸಗಿ ಸಂಸ್ಥೆಗಳೂ ಸೇರಿವೆ.

    ಸರ್ಕಾರಿ ನೌಕರರಿಗೆ ಕೇಂದ್ರದ ಅರ್ಧ ದಿನದ ವಿರಾಮಕ್ಕೆ ಅನುಗುಣವಾಗಿ, ರಾಜ್ಯ ಸರ್ಕಾರಿ ಕಚೇರಿಗಳನ್ನು ಮಧ್ಯಾಹ್ನ 2.30 ರವರೆಗೆ ಮುಚ್ಚಲಾಗುವುದು ಎಂದು ಅಸ್ಸಾಂ ಹೇಳಿದೆ. ರಾಜ್ಯ ಸರ್ಕಾರವೂ ನಾಳೆ ಡ್ರೈ ಡೇ ಎಂದು ಘೋಷಿಸಿದೆ. ಮೀನು ಮತ್ತು ಮಾಂಸದ ಅಂಗಡಿಗಳು ಸಂಜೆ 4 ಗಂಟೆಯವರೆಗೆ ಮುಚ್ಚಲ್ಪಡುತ್ತವೆ. ಅಲ್ಲದೆ, ರೆಸ್ಟೋರೆಂಟ್‌ಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಮಾಂಸಾಹಾರ ನೀಡುವುದನ್ನು ನಿರ್ಬಂಧಿಸಲಾಗಿದೆ.

    ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅಂಗಡಿಗಳನ್ನು ಮುಚ್ಚುವಂತೆ ನಾವು ವ್ಯಾಪಾರ ಸಂಸ್ಥೆಗಳಿಗೆ ಮನವಿ ಮಾಡುತ್ತೇವೆ ಎಂದು ಶ್ರೀ ಶರ್ಮಾ ಹೇಳಿದರು.

    ಯಾವುದೇ ಕೋಮು ಗಲಭೆ ತಡೆಯಲು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಸ್ಸಾಂ ಸರ್ಕಾರ ಹೇಳಿದೆ.

    ಕಲಾವಿದನ ಕೈಚಳಕದಲ್ಲಿ ಅರಳಿದ ಅಯೋಧ್ಯಾ ಶ್ರೀರಾಮಮಂದಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts