ನ. 25ರಿಂದ ಡಿ. 20ರವರೆಗೆ Parliament Winter Session; ಸರ್ವಪಕ್ಷ ಸಭೆ ಕರೆದ ಸರ್ಕಾರ

Parliament Session
Published on

ನವದೆಹಲಿ: ನವೆಂಬರ್​ 25ರಿಂದ ಡಿಸೆಂಬರ್​ 20ರವರೆಗೆ ಸಂಸತ್​ ಚಳಿಗಾಲದ ಅಧಿವೇಶನ (Parliament Winter session) ನಡೆಯಲಿದ್ದು, ಇದರ ಅಂಗವಾಗಿ ನವೆಂಬರ್​ 24ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಕಿರಣ್​ ರಿಜುಜು ಪೋಸ್ಟ್​ ಮಾಡಿದ್ದು, ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವನೇಶನಕ್ಕೂ ಮುನ್ನ ನವೆಂಬರ್ 24ರಂದು ಬೆಳಿಗ್ಗೆ 11ಕ್ಕೆ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಸಂವಿಧಾನ ಅಂಗೀಕರಿಸಿ 75ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ನವೆಂಬರ್ 26ಕ್ಕೆ ಸೆಂಟ್ರಲ್ ಹಾಲ್‌ನ ಸಂವಿಧಾನ ಸದನ ಅಥವಾ ಹಳೆಯ ಸಂಸತ್ತಿನ ಕಟ್ಟಡದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಅಧಿವೇಶನ ಆರಂಭಕ್ಕೂ ಮುನ್ನ ಸರ್ವಪಕ್ಷಗಳ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸುವುದು ವಾಡಿಕೆಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರವು ತನ್ನ ಕಾರ್ಯಸೂಚಿಯನ್ನು ಮುಂದಿಡಲಿದೆ. ವಿವಿಧ ವಿಷಯಗಳ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುವ ನಿರೀಕ್ಷೆಯಿದೆ.

https://www.vijayavani.net/nagarjuna-on-nayantharas-past-turbulent-relationship-we-would-all-dread-her-phone-ringing

https://www.vijayavani.net/omkar-salvi-appointed-as-rcbs-new-bowling-coach-ahead-of-ipl-2025-season

https://www.vijayavani.net/dr-g-parameshwar-reacts-to-naxalite-vikram-gowda-encounter

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net