ಆಕೆಗೆ ಫೋನ್​ ಬಂದರೆ ನಮಗೆ ಭಯವಾಗುತ್ತಿತ್ತು; ನಟಿ Nayanthara ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಟಾಲಿವುಡ್​ ನಟ

Nayanthara
Published on

ಹೈದರಾಬಾದ್​​: ಸೌತ್​ ಸಿನಿ ಇಂಡಸ್ಟ್ರಿಯಲ್ಲಿ ಲೇಡಿ ಸೂಪರ್​ಸ್ಟಾರ್​ ನಯನತಾರಾ (Nayanthara) ಹಾಗೂ ಧನುಷ್​ (Dhanush) ನಡುವಿನ ಹೆಸರು ಪ್ರಸ್ತುತ ಚಾಲ್ತಿಯಲ್ಲಿದ್ದು, ಅದಕ್ಕೆ ನಯನತಾರಾ ಅವರು ಬರೆದಿರುವ ಸುದೀರ್ಘ ಪತ್ರ ಕಾರಣ ಎಂದರೆ ತಪ್ಪಾಗಲಾರದು. ನಯನತಾರಾ ಬರೆದಿರುವ ಸುದೀರ್ಘ ಪತ್ರದಲ್ಲಿ ಧನುಷ್​ ವಿರುದ್ಧ ವಾಗ್ದಳಿ ನಡೆಸಿರುವ ನಡೆಸಿದ್ದಾರೆ. ಇದಕ್ಕೆ ಕಾರಣ ಜನಪ್ರಿಯ ಒಟಿಟಿ ತಾಣ ನೆಟ್​ಫ್ಲಿಕ್ಸ್​ ತಯಾರಿಸಿರುವ Nayanthara: Beyond The Fairytale ಎಂಬ ಸಾಕ್ಷ್ಯಚಿತ್ರ.

Nayanthara: Beyond The Fairytale ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಅದರಲ್ಲಿ ನಾನುಮ್​ ರೌಡಿ ಥಾನ್ ಚಿತ್ರಕ್ಕೆ ಸಂಬಂಧಿಸಿದ ಕೆಲ ಶೂಟಿಂಗ್​ ವಿಡಿಯೋವನ್ನು ಬಳಸಲಾಗಿದೆ. ನಿರ್ಮಾಪಕ ಧನುಷ್ (Dhanush) ಅವರ ಅನುಮತಿಯಿಲ್ಲದೆ ವಿಡಿಯೋ ಬಳಸಿದ್ದಕ್ಕೆ 10 ಕೋಟಿ ರೂ. ಪರಿಹಾರ ನೀಡುವಂತೆ ನಯನತಾರಾಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ನಯನತಾರಾ (Nayanthara) ಸುದೀರ್ಘ ಪತ್ರ ಬರೆಯುವ ಮೂಲಕ ಧನುಷ್​ ಅವರ ನಡೆಗೆ ಕಿಡಿಕಾರಿದ್ದಾರೆ. ಇದೀಗ ನಟಿ ನಯನತಾರಾ (Nayanthara) ಅವರ ಬಗ್ಗೆ ಟಾಲಿವುಡ್​ನ ಹಿರಿಯ ನಟ ನಾಗಾರ್ಜುನ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Nagarjuna

Nayanthara: Beyond The Fairytale ಡಾಕ್ಯೂಮೆಂಟರಿಯಲ್ಲಿ ನಟಿ ನಯನತಾರಾ (Nayanthara) ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿರುವ ನಾಗಾರ್ಜುನ, ನಾನು ಆಕೆಯನ್ನು ಮೊದಲು ಭೇಟಿಯಾಗಿದ್ದು, ಬಾಸ್​ ಸಿನಿಮಾದ ಚಿತ್ರೀಕರಣದಲ್ಲಿ. ಆಕೆ ಆ ಸಮಯದಲ್ಲಿ ರಿಲೇಷನ್​ಶಿಪ್​ನಲ್ಲಿದ್ದಳು ಎಂದು ನಾನು ಭಾವಿಸುತ್ತೇನೆ. ಶೂಟಿಂಗ್​ ಸಮಯದಲ್ಲಿ ಆಕೆಯ ಫೋನ್​ ರಿಂಗ್​ ಆದಾಗಲೆಲ್ಲಾ ನಮಗೆ ಭಯವಾಗುತ್ತಿತ್ತು. ಈ ಬಗ್ಗೆ ನಾನು ಆಕೆಯ ಜೊತೆ ಮಾತನಾಡಿದ್ದೆ. ಆಕೆ ಮೊದಲ ಬಾರಿ ಸೆಟ್​ಗೆ ಬಂದಾಗ ಎಲ್ಲರೊಂದಿಗೆ ಮಾತನಾಡಿದ ರೀತಿ ನೋಡಿ ನನಗೆ ಇಷ್ಟವಾಯಿತು. ಎಲ್ಲರೊಂದಿಗೆ ಬೆರೆತ ರೀತಿ ಈಗಲೂ ಮರೆಯಲು ಸಾಧ್ಯವಿಲ್ಲ.

ನಟಿಯ ಖಾಸಗಿ ಜೀವನದ ಬಗ್ಗೆ ಮಾತನಾಡಿ, ನಾನು ನೋಡಿದಂತೆ ಆಕೆಯ ಮೊದಲ ಸಂಬಂಧದಲ್ಲಿ ಪ್ರೀತಿಗಿಂತ ಹೆಚ್ಚಾಗಿ ನಂಬಿಕೆ ಮುಖ್ಯ ಎಂದು ತಿಳಿದುಕೊಂಡಳು. ಆಕೆಯ ಬಗ್ಗೆ ವದಂತಿಗಳನ್ನು ಕೇಳಿದಾಗ ನನಗೆ ತುಂಬಾ ಬೇಸರವಾಯಿತು . ಜನರು ತಮ್ಮಿಷ್ಟಕ್ಕೆ ಬಂದಂತೆ ಮಾತನಾಡಲು ಶುರು ಮಾಡಿದರು. ಇವತ್ತಿನವರೆಗೂ ಜನರು ಹೆಣ್ಣುಮಕ್ಕಳ ಬಳಿ ಪ್ರಶ್ನಿಸುವ ಬದಲು ಹುಡುಗರನ್ನು ಕೇಳಿ ಅದು ಬಿಟ್ಟು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ನಾಗಾರ್ಜುನ Nayanthara: Beyond The Fairytale ಡಾಕ್ಯೂಮೆಂಟರಿಯಲ್ಲಿ ನಟಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net