

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ವರ್ಷದಿಂದ ವರ್ಷಕ್ಕೆ ಬೊಕ್ಕಸಕ್ಕೆ ಭಾರವಾಗುತ್ತಿರುವ ವಿದ್ಯುತ್ ಪಂಪ್ಸೆಟ್ ಸಬ್ಸಿಡಿಯನ್ನು ಪರಾಮಶಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ಕವಲೊಡೆದಿದೆ. ಒಂದೊಮ್ಮೆ ಈ ನಿರ್ಧಾರ ಕೈಗೊಂಡಿದ್ದೇ ಆದಲ್ಲಿ ವಾರ್ಷಿಕ 5 ಸಾವಿರ ಕೋಟಿ ರೂ. ಹೊರೆ ತಗ್ಗಿಸಬಹುದೆಂಬುದು ಇದರ ಹಿಂದಿರುವ ಲೆಕ್ಕಾಚಾರ. ಅರ್ಹರಿಗೆ ಯೋಜನೆಯ ಲಾಭ ಸಿಗಬೇಕೆಂಬುದು ಆಶಯ. ಆದರೆ ಸ್ಥಿತಿವಂತರು, ರೈತರಲ್ಲದವರೂ ಲಾಭ ಪಡೆದುಕೊಳ್ಳುತ್ತಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಇದೇ ಕಾರಣದಿಂದ ಫಲಾನುಭವಿಗಳ ಪಟ್ಟಿಯನ್ನೊಮ್ಮೆ ಸೋಸಿ, ಅರ್ಹರನ್ನಷ್ಟೇ ಉಳಿಸಿದರೆ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಉಳಿತಾಯ ಆಗಬಹು ದೆಂಬ ಅಂದಾಜನ್ನು ಹಣಕಾಸು ಇಲಾಖೆ ಮಾಡಿದೆ.
ಸರ್ಕಾರಕ್ಕೆ ಸಿಕ್ಕ ಮಾಹಿತಿ: ಕರ್ನಾಟಕದ ಜನಸಂಖ್ಯೆ ಪ್ರಮಾಣವು ಜೀವನೋಪಾಯಕ್ಕೆ ಕೃಷಿ ಮೇಲೆ ಅವಲಂಬಿತವಾಗಿದೆ. ಕೃಷಿಗೆ ಅಗತ್ಯವಾದ ನೀರಾವರಿ ಪಂಪ್ಗಳಿಗೆ ವಿದ್ಯುತ್ ಸಬ್ಸಿಡಿಯನ್ನು ಸರ್ಕಾರವೇ ವೆಚ್ಚ ಮಾಡುತ್ತಿರುವುದು ಕೃಷಿ ನೀತಿಯ ಮೂಲಾಧಾರವಾಗಿದೆ. ಆ ಮೂಲಕ ಕಾರ್ಯಾ ಚರಣೆಯ ವೆಚ್ಚ ಕಡಿಮೆ ಮಾಡಿ ರೈತರನ್ನು ಬೆಂಬಲಿ ಸುವ ಗುರಿ ಹೊಂದಿದೆ. ಆರ್ಥಿಕ ವಿಚಾರಕ್ಕೆ ಬಂದರೆ ನೀರಾವರಿ ಪಂಪ್ಗಳಿಗೆ ಸಬ್ಸಿಡಿ ವಿದ್ಯುತ್ನ ಆರ್ಥಿಕ ಹೊರೆ ಗಣನೀಯವಾಗಿ ಬೆಳೆದಿದೆ.
ಸಬ್ಸಿಡಿ ಬೇಡಿಕೆ 2016ರಲ್ಲಿ 10,118 ಕೋಟಿ ರೂ.ಗಳಿತ್ತು. 2023ರಲ್ಲಿ 22,387 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ. ಈ ಏಳು ವರ್ಷದ ಸರಾಸರಿ ಗಮನಿಸಿದರೆ, ಶೇ.121ರಷ್ಟು ಹೆಚ್ಚಳವಾದಂತಾಗಿದೆ. ನೀರಾವರಿ ಪಂಪ್ ವಿದ್ಯುತ್ ಸಂಪರ್ಕಗಳ ಸಂಖ್ಯೆ 2012ರಲ್ಲಿ 20 ಲಕ್ಷ ಇತ್ತು. ಇದು 2023ರಲ್ಲಿ 34.17 ಲಕ್ಷಕ್ಕೆ ಏರಿಕೆಯಾಗಿದೆ. ಇದರ ಪ್ರಮಾಣ ಶೇ.70.85 ಎಂದು ಅಂದಾಜಿಸಲಾಗಿದೆ. ಇನ್ನು ಪ್ರತಿ ವರ್ಷವೂ ಹೊಸದಾಗಿ 1.2 ಲಕ್ಷ ಪಂಪ್ಸೆಟ್ಗಳು ಈ ಸಬ್ಸಿಡಿಗೆ ಸೇರ್ಪಡೆಯಾಗುತ್ತಿದೆ.
ಸರ್ಕಾರ ಏನು ಮಾಡಬೇಕು?
ದುರುಪಯೋಗಕ್ಕೆ ಸಾಕ್ಷ್ಯ: ಸರ್ಕಾರಕ್ಕೆ ಸಿಕ್ಕ ಮಾಹಿತಿಯಲ್ಲಿ ಮತ್ತೊಂದು ಆತಂಕಕಾರಿ ವಿಚಾರವಿದೆ. 9 ಲಕ್ಷ ಪಂಪ್ಸೆಟ್ಗಳಿಗೆ ಸಂಬಂಧಿಸಿದ 5.68 ಲಕ್ಷ ಫಲಾನುಭವಿಗಳ ಹೆಸರು ರೈತ ಫಲಾನುಭವಿಗಳ ಸರ್ಕಾರಿ ಡೇಟಾಬೇಸ್ನಲ್ಲಿ ಇಲ್ಲ. ಫ್ರೂಟ್ಸ್ ಪೋರ್ಟಲ್ನಲ್ಲಿ ರೈತರ ನಿಖರ ಪಟ್ಟಿ ಇದೆಯಾದರೂ ಅದರಲ್ಲಿ ಇಷ್ಟು ಸಂಖ್ಯೆಯ ಮಾಹಿತಿ ಉಲ್ಲೇಖವಾಗಿಲ್ಲ. ಶ್ರೀಮಂತ ರೈತರು ಅಥವಾ ಕೃಷಿಯೇತರ ಬಳಕೆದಾರರು ಸಬ್ಸಿಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ. ಫಲಾನುಭವಿಗಳ ಲೆಕ್ಕಾಚಾರ