

ಶಿಕಾರಿಪುರ: ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ, ಕೃಷಿ, ತೋಟಗಾರಿಕೆ ಮತ್ತು ಪಶು ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜದ ಸಹಭಾಗಿತ್ವದಲ್ಲಿ ವಿಕಸಿತ ಸಂಕಲ್ಪ ಕೃಷಿ ಅಭಿಯಾನವನ್ನು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜೂ.9ರಿಂದ 11ರವರೆಗೆ ಆಯೋಜಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ ತಿಳಿಸಿದ್ದಾರೆ.
ಮುಂಗಾರು ಹಂಗಾಮು ಕುರಿತು ವಿವಿಧ ಬೆಳೆಗಳ ತಾಂತ್ರಿಕ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನೀಡಲಿದ್ದಾರೆ. ಜತೆಗೆ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳು ಹಾಗೂ ನೀಡಲಾಗುವ ಸವಲತ್ತುಗಳ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮ ನಡೆಯುವ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು, ತಾಲೂಕು ಕೃಷಿಕ ಸಮಾಜದ ಸದಸ್ಯರು, ರೈತರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಜೂ.9ರಂದು ಬೆಳಗ್ಗೆ 10.30ಕ್ಕೆ ಶಿರಾಳಕೊಪ್ಪ ರೈತ ಸಂಪರ್ಕ ಕೇಂದ್ರ, ಮಾರವಳ್ಳಿ ಗ್ರಾಪಂ, ಮಧ್ಯಾಹ್ನ 2.30ಕ್ಕೆ ತೊಗರ್ಸಿ ಗ್ರಾಪಂ ಆವರಣ, ಶಿಕಾರಿಪುರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, 10ರಂದು ಬೆಳಗ್ಗೆ 10.30ಕ್ಕೆ ಹಿತ್ಲ ಗ್ರಾಪಂ, ಹೊಸೂರು ಗ್ರಾಪಂ, ಮಧ್ಯಾಗ್ನ 2.30ಕ್ಕೆ ಕಪ್ಪನಹಳ್ಳಿ ಆಂಜನೇಯ ದೇವಸ್ಥಾನದ ಸಮುದಾಯ ಭವನ, ಮುತ್ತಗಿ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ, ಜೂ.11ರಂದು ಬೆಳಗ್ಗೆ 10.30ಕ್ಕೆ ಬಳ್ಳಿಗಾವಿ ಗ್ರಾಪಂ, ಮಧ್ಯಾಹ್ನ 2.30ಕ್ಕೆ ಚುರ್ಚಿಗುಂಡಿ ಗ್ರಾಪಂ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.