ಭಾರತೀಯ ಸೈನಿಕನ ನಿಗೂಢ ಸಾವು; ಇದು ದೇಶದ ಅಗ್ನಿವೀರರ ಪೈಕಿ ಮೊದಲ ಮರಣ!

Soldier Akshay
Published on

ನವದೆಹಲಿ: ಭಾರತೀಯ ಸೇನೆಯ ಸೈನಿಕರೊಬ್ಬರು ಕರ್ತವ್ಯದಲ್ಲಿ ಇರುವಾಗಲೇ ಸಾವಿಗೀಡಾಗಿದ್ದು, ಸಾಯಲು ಕಾರಣ ಏನು ಎಂಬುದಿನ್ನೂ ಖಚಿತವಾಗಿಲ್ಲ. ಮಾತ್ರವಲ್ಲ, ಇದು ದೇಶದ ಅಗ್ನಿವೀರರ ಪೈಕಿ ಮೊದಲ ಸಾವು. ಸಿಯಾಚಿನ್ ಗ್ಲೇಸಿಯರ್​ನಲ್ಲಿ ಈ ಪ್ರಕರಣ ಸಂಭವಿಸಿದೆ.

ಅತ್ಯಂತ ದುರ್ಗಮ ಪ್ರದೇಶವಾದ ಸಿಯಾಚಿನ್ ಗ್ಲೇಸಿಯರ್​ನಲ್ಲಿ ಸಂಭವಿಸಿರುವ ಈ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಗಾವಟೆ ಅಕ್ಷಯ್ ಲಕ್ಷ್ಮಣ್​ ಸಾವಿಗೀಡಾಗಿದ್ದಾರೆ. ಇವರು ದೇಶದಲ್ಲಿನ ಅಗ್ನಿವೀರರ ಪೈಕಿ ಸಾವಿಗೀಡಾದ ಮೊದಲ ವ್ಯಕ್ತಿ ಎಂದೂ ಮೂಲಗಳು ತಿಳಿಸಿವೆ.

ಇಂಡೋ-ಪಾಕ್ ಲೈನ್ ಆಫ್ ಕಂಟ್ರೋಲ್ ಪ್ರದೇಶದಲ್ಲಿ ಇರುವ ಸಿಯಾಚಿನ್ ಗ್ಲೇಸಿಯರ್ ಜಗತ್ತಿನಲ್ಲೇ ಅತ್ಯಂತ ಎತ್ತರದಲ್ಲಿರುವ ಯುದ್ಧತಾಣ ಎಂದು ಹೆಸರು ಪಡೆದಿದೆ. ಅಲ್ಲದೆ ಸಿಯಾಚಿನ್​ ದೇಶದ ಅತಿ ದೊಡ್ಡ ಹಾಗೂ ಜಗತ್ತಿನ ಎರಡನೇ ಅತಿ ದೊಡ್ಡ ಹಿಮಚ್ಛಾದಿತ ಪ್ರದೇಶವಾಗಿದೆ.

ಅಗ್ನಿಪಥ ಯೋಜನೆ: ಭಾರತೀಯ ಸೇನೆಗೆ ಸೈನಿಕರನ್ನು ನೇಮಿಸಿಕೊಳ್ಳುವ ಸಲುವಾಗಿ 2022ರ ಜೂನ್​ನಲ್ಲಿ ಅಗ್ನಿಪಥ ಯೋಜನೆ ಘೋಷಿಸಲಾಗಿತ್ತು. ಈ ಯೋಜನೆ ಮೂಲಕ ನೇಮಿಸಿಕೊಂಡ ಸೈನಿಕರನ್ನು ಅಗ್ನಿವೀರರು ಎಂದು ಕರೆಯಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net