ಮೃತದೇಹದ ಎದೆಯ ಮೇಲೆ ಕುಳಿತು ಪೂಜೆ ಮಾಡಿದ ಅಘೋರಿ!

Aghora
Published on

ತಮಿಳುನಾಡು: ಪ್ರತಿಯೊಂದು ಸಮುದಾಯಕ್ಕೂ ಅದರದ್ದೇ ಆಗಿರುವ ಸಂಸ್ಕೃತಿ, ಆಚಾರ, ಆಹಾರ ಪದ್ಧತಿ ಇದೆ. ಕಲವೊಮ್ಮೆ ವಿಭಿನ್ನವಾದ ಆಚರಣೆಗಳು ಸುದ್ದಿಯಾಗುತ್ತವೆ. ಹೀಗೆ ತಮಿಳುನಾಡಿನಲ್ಲಿ ಅಘೋರಿಯೊಬ್ಬರು ಶವದ ಎದೆಯ ಮೇಲೆ ಕುಳಿತು ಹೆಣದ ಪೂಜೆ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಮಣಿಕಂಠನ್ ಎನ್ನುವ ವ್ಯಕ್ತಿಯೊಬ್ಬ ಪತ್ನಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಮಣಿಕಂಠನ್ ಮೃತದೇಹವನ್ನು ಅವರ ಕುಟುಂಬಸ್ಥರು ಸೂಲ್ಲೂರಿಗೆ ತಂದು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅದೇ ವೇಳೆ ಮಣಿಕಂಠನ ಗೆಳೆಯರಾಗಿದ್ದ ಅಘೋರಿಗಳು ಸ್ಥಳಕ್ಕೆ ಬಂದಿದ್ದಾರೆ.

ಮಣಿಕಂಠನ್ ಮನಃ ಶಾಂತಿಗಾಗಿ ಪೂಜೆ ಮಾಡುತ್ತೇವೆಂದು ಕುಟುಂಬಸ್ಥರ ಬಳಿ ಹೇಳಿದ್ದಾರೆ. ಅಘೋರಿ ಓ ಅಘೋರಾ.. ಅಘೋರ...ಎನ್ನುತ್ತಾ ಮೃತ ಮಣಿಕಂಠನ ಶವದ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತು ಮಂತ್ರಗಳನ್ನು ಪಠಿಸಿದ್ದಾರೆ.

ಭಯಭೀತಗೊಂಡ ಕುಟುಂಬಸ್ಥರು, ಈ ಪೂಜೆ ಮಾಡಲು ಸತ್ತ ವ್ಯಕ್ತಿಯ ಮೇಲೆ ಕುಳಿತಿರುವುದು ವಿಚಿತ್ರವಾಗಿದೆ. ಸತ್ತ ಸ್ನೇಹಿತನ ಶವವನ್ನು ಪೂಜಿಸುವುದು ಹೀಗಾ? ಎಂದು ಆಕ್ರೋಶ, ಆತಂಕ ವ್ಯಕ್ತಪಡಿಸಿದ್ದಾರೆ. ಅಘೋರಿಗಳ ಈ ವಿಚಿತ್ರ ಪೂಜೆ ಮಾತ್ರ ಭಯ ಮೂಡಿಸಿದ್ದು ಖಂಡಿತಾ ಹೌದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net